ಸಮಗ್ರ ನ್ಯೂಸ್: ಉಡುಪಿಯ ಸಿಟಿ ಬಸ್ ನಿಲ್ದಾಣದಲ್ಲಿ ಮಂಗಳಮುಖಿಯರ ಅನೈತಿಕ ದಂಧೆ ಮಿತಿಮೀರಿದ್ದು, ಮಧ್ಯರಾತ್ರಿ ಉಡುಪಿ ಎಸ್‌ಪಿ ಕಾರ್ಯಚರಣೆ ನಡೆಸಿದ್ದಾರೆ. ಎಸ್‌ಪಿ ಎಂದು ತಿಳಿಯದ ಮಂಗಳ ಮುಖಿಯರು ಎಸ್‌ಪಿ ಜತೆಗೆ ವಾಗ್ವಾದಕ್ಕಿಳಿದು, ಅವಾಚ್ಯ ಶಬ್ಧಗಳಿಂದ ಬೈದು ನಿಂದಿಸಿರುವ ಘಟನೆ ನಡೆದಿದೆ.
ಈ ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಮಾಹಿತಿ ಇದ್ದು, ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ತಂಡ ಕಾರ್ಯಪ್ರವೃತ್ತವಾಗಿದೆ. ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅನೈತಿಕ ಚಟುವಟಿಕೆ ಹತ್ತಿಕ್ಕುವ ಕಾರ್ಯಾಚರಣೆ ವೇಳೆ ಕೆಲಕಾಲ ಬಿಗುವಿನ ವಾತಾವರಣವು ನಿರ್ಮಾಣವಾಗಿತ್ತು. ಗ್ರಾಹಕರನ್ನು ರಿಕ್ಷಾದಲ್ಲಿ ಕರೆ ತಂದು ಅನೈತಿಕ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಇಬ್ಬರು ದಲ್ಲಾಳಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ಸ್ವತಃ ಎಸ್‌ಪಿ ಅಕ್ಷಯ್ ಹಾಕೇ ಮಚ್ಚಿಂದ್ರ ಫೀಲ್ಡಿಗಿಳಿದಿದ್ದರು.
ನಗರದಲ್ಲಿ ಕೆಲವು ಮಂಗಳಮುಖಿಯರು ವಾಹನ ಸವಾರರನ್ನು ಅಡ್ಡ ಹಾಕಿ ತೊಂದರೆ ಕೊಡುವುದು. ಜತೆಗೆ ದಾರಿದೀಪವನ್ನು ಒಡೆದು ಹಾಕಿ, ಕತ್ತಲಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಾರೆ ಎನ್ನುವ ದೂರು ಬಂದಿತ್ತು. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.