ಸಮಗ್ರ ನ್ಯೂಸ್: ಭಾರತೀಯ ಪದ್ದತಿಯಲ್ಲಿ ತಿನ್ನುವ ಮತ್ತು ಕುಡಿಯುವ ಬಗ್ಗೆ ಅನೇಕ ರೀತಿಯ ಸಲಹೆಗಳನ್ನು ನೀಡಲಾಗಿದೆ. ಇವುಗಳನ್ನು ಅನುಸರಿಸುವುದರಿಂದ ನೀವು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಲಿದ್ದೀರಿ. ಕೆಲವರಿಗೆ ಹಾಲು ಕುಡಿದ ನಂತರ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುವುದನ್ನು ನೀವು ನೋಡಿರಬಹುದು ಅಥವಾ ಅನುಭವಿಸಿರಬಹುದು.
ಇದು ಕೆಲವರಿಗೆ ಹೊಟ್ಟೆನೋವು ಆಗಿ ಪರಿಣಮಿಸುತ್ತದೆ. ಇದಕ್ಕೆ ನಿಜವಾದ ಕಾರಣ ನಿಮ್ಮ ಆಹಾರವನ್ನು ಸೇವಿಸುವ ತಪ್ಪು ವಿಧಾನವಾಗಿರಬಹುದು. ಈ ಕಾರಣದಿಂದಾಗಿ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಲನ್ನು ನಿಂತು ಕುಡಿಯಬೇಕು, ಕುಳಿತಲ್ಲೇ ನೀರು ಕುಡಿಯಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಬಗ್ಗೆ ವಿಸ್ಕೃತ ಮಾಹಿತಿ ಇಲ್ಲಿದೆ.
*ನೀರು ಯಾಕೆ ಕುಳಿತು ಕುಡಿಯಬೇಕು?
ಕುಳಿತಲ್ಲೇ ನೀರು ಕುಡಿಯುವುದರಿಂದ ಅಪಾಯಕಾರಿ ರಾಸಾಯನಿಕಗಳು ರಕ್ತದಲ್ಲಿ ಕರಗುವುದಿಲ್ಲ ಮತ್ತು ರಕ್ತವನ್ನು ಶುದ್ಧಗೊಳಿಸುತ್ತದೆ ಎಂಬ ಕಾರಣಕ್ಕೆ ಕುಳಿತಲ್ಲೇ ನೀರು ಕುಡಿಯಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಇದರೊಂದಿಗೆ, ನಾವು ಆಹಾರ ಸೇವಿಸಿದ ತಕ್ಷಣ ನೀರು ಕುಡಿಯಬಾರದು ಮತ್ತು ಒಂದೇ ಬಾರಿಗೆ ಹೆಚ್ಚು ನೀರು ಕುಡಿಯಬಾರದು. ಬದಲಾಗಿ ಸ್ವಲ್ಪ ಸ್ವಲ್ಪವೇ ನೀರು ಕುಡಿಯಬೇಕು.
ಹಾಲನ್ನು ಹೀಗೆ ಕುಡಿಯಬೇಕು:
ಹಾಲು ಕುಡಿದ ನಂತರ ಜೀರ್ಣಕ್ರಿಯೆಗೆ ತುಂಬಾ ತೊಂದರೆಯಾಗುವುದು ಕೆಲವರಲ್ಲಿ ಕಂಡುಬರುತ್ತದೆ. ಹಾಲು ಕುಡಿದ ನಂತರ ಹಲವರಿಗೆ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಇರುತ್ತದೆ. ಆರೋಗ್ಯ ತಜ್ಞರ ಪ್ರಕಾರ ನಾವು ಪ್ರತಿನಿತ್ಯ ಹಾಲನ್ನು ನಿಂತಲ್ಲೇ ಕುಡಿಯಬೇಕು. ಇದರೊಂದಿಗೆ, ಹಾಲನ್ನು ಯಾವಾಗಲೂ ಲಘುವಾಗಿ ಬಿಸಿ ಮಾಡಬೇಕು ಮತ್ತು ಆಹಾರವನ್ನು ಸೇವಿಸಿದ 2 ಗಂಟೆಗಳ ನಂತರ ಕುಡಿಯಬೇಕು. ಇದು ನಿಮ್ಮ ಮೊಣಕಾಲುಗಳನ್ನು ಸ್ಥಿರವಾಗಿರಿಸುತ್ತದೆ ಮತ್ತು ಇದು ಸ್ನಾಯುಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ.