ಸಮಗ್ರ ನ್ಯೂಸ್: ಜಾತಿ, ಧರ್ಮದ ಬೇಧವಿಲ್ಲದೆ, ತಿನ್ನುವ ಅನ್ನ, ಕುಡಿಯುವ ನೀರು ಒಂದೇ ಎಂಬ ಭಾವನೆಯಲ್ಲಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮುಸ್ಲಿಂ ಯುವಕರು, ಅಯ್ಯಪ್ಪ ಮಾಲಾಧಾರಿಗಳಿಗೆ ಊಟ ಬಡಿಸಿ, ಕೋಮು ಸೌಹಾರ್ದತೆ ಮೆರೆದರು.
ತಮಿಳುನಾಡಿನ ಕೃಷ್ಣಗಿರಿ ಪಜಯಪಟ್ಟೈ ಮಿಲಾಡುನಾಬಿ ಇಸ್ಲಾಮಿಕ್ ಯುವಕರ ತಂಡ, ಪ್ರತಿವರ್ಷ ಗಣೇಶ ಚತುರ್ಥಿ ಸಮಯದಲ್ಲಿ ಭಕ್ತರಿಗೆ ಅನ್ನ ಪ್ರಸಾದ ಹಂಚುವುದು ಹಾಗೂ ಅಯ್ಯಪ್ಪ ಮಾಲಾಧಾರಿಗಳಿಗೆ ಪೂಜಾ ಸಾಮಗ್ರಿ ಮತ್ತು ಆಹಾರವನ್ನು ಒದಗಿಸುವ ಮೂಲಕ ಎರಡು ಧರ್ಮಗಳ ನಡುವಿನ ಸಾಮರಸ್ಯ ಮತ್ತು ಒಗ್ಗಟ್ಟನ್ನ ಪ್ರದರ್ಶಿಸುತ್ತದೆ.
ಕಳೆದ ಐದು ವರ್ಷಗಳಿಂದಲೂ ಮುಸ್ಲಿಂ ಯುವಕರ ತಂಡ ಈ ಕಾರ್ಯವನ್ನ ತಪ್ಪದೇ ಪಾಲಿಸಿಕೊಂಡು ಹೋಗುತ್ತಿದೆ. ಅಷ್ಟೆ ಅಲ್ಲ Miladu Nabi ಇಸ್ಲಾಮಿಕ್ ಆರ್ಗೆನೈಜೆಷನ್ ಈ ಸಂದರ್ಭದಲ್ಲಿ ವಿಶೇಷ ಭಜನೆಯ ಕಾರ್ಯಕ್ರಮವನ್ನು ಮಾಡುತ್ತಾರೆ. ಜೊತೆಗೆ ಅಯ್ಯಪ್ಪ ಮಾಲಾಧಾರಿಗಳ ಕುಟುಂಬದವರಿಗೂ ಆಹಾರ ಸಾಮಗ್ರಿಗಳನ್ನು ಕೊಡಲಾಗುತ್ತದೆ. ಈ ರೀತಿಯ ಸೌಹಾರ್ದತೆಯುಕ್ತ ಕೆಲಸಗಳು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಸಹಾಯಕವಾಗಿವೆ.