Ad Widget .

ಮ್ಯಾಂಡಸ್ ಅಬ್ಬರ; ತಮಿಳುನಾಡು ತತ್ತರ| ಜನಜೀವನ ಅಸ್ತವ್ಯಸ್ತ, ನಾಲ್ಕು ಸಾವು

ಸಮಗ್ರ ನ್ಯೂಸ್: ಬಂಗಾಳಕೊಲ್ಲಿ ಸೃಷ್ಟಿಯಾಗಿರುವ ಮ್ಯಾಂಡಸ್‌ ಚಂಡಮಾರುತ ತಮಿಳುನಾಡು ಕಡಲ ತೀರಕ್ಕೆ ಅಪ್ಪಳಿಸಿದ್ದು, ಭಾರಿ ಅನಾಹುತ ಸೃಷ್ಟಿಸಿದೆ. 70 ಕಿ.ಮೀ. ವೇಗದಲ್ಲಿ ಚಲಿಸುತ್ತಿರುವ ಗಾಳಿಯಿಂದಾಗಿ ಭಾರಿ ಮಳೆ ಸುರಿದಿದ್ದು, ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಚಂಡಮಾರುತ ಆಂಧ್ರಪ್ರದೇಶದತ್ತ ಚಲಿಸಿದ್ದು, ಅಲ್ಲೂ ಸಹ ಮಳೆಯಾಗುತ್ತಿದೆ. ಆದರೆ, ಅಪ್ಪಳಿಸಿದ ಬಳಿಕ ಚಂಡಮಾರುತವು ವಾಯುಭಾರ ಕುಸಿತವಾಗಿ ಮಾರ್ಪಾಟಾಗಿದ್ದು, ಮೊದಲಿನ ತೀವ್ರತೆ ಕಳೆದುಕೊಂಡಿದೆ. ಹೀಗಾಗಿ ಇನ್ನು ಮಳೆ ಕ್ಷೀಣಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

Ad Widget . Ad Widget . Ad Widget .

ಚೆನ್ನೈ ನಗರದಲ್ಲಿ ಸುಮಾರು 400ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಮಳೆಯಿಂದ ಉಂಟಾದ ಅನಾಹುತದಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ತಮಿಳುನಾಡು ವಿಪತ್ತು ನಿರ್ವಹಣಾ ದಳ ಬಿದ್ದ ಮರಗಳನ್ನು ತೆರವುಗೊಳಿಸುತ್ತಿದೆ. ವಿದ್ಯುತ್‌ ಕಂಬಗಳು ಮುರಿದು ಬಿದ್ದಿರುವುರಂದ 600ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ.

ಭಾರಿ ಮಳೆಯಿಂದ ಉಂಟಾಗಿರುವ ಹಾನಿಯನ್ನು ಸರಿಪಡಿಸಲು 25 ಸಾವಿರ ಕೆಲಸಗಾರರು ಶ್ರಮವಹಿಸುತ್ತಿದ್ದಾರೆ. ಸುಮಾರು 22 ಸಬ್‌ವೇಗಳಲ್ಲಿ ನೀರನ್ನು ತೆರವು ಮಾಡಲಾಗಿದ್ದು, ಸಂಚಾರ ಸುಗಮಗೊಂಡಿದೆ. ಸುಮಾರು 9 ಸಾವಿರ ಜನರನ್ನು 205 ಪರಿಹಾರ ಕೇಂದ್ರಗಳಿಗೆ ಸುರಕ್ಷಿತವಾಗಿ ವರ್ಗಾವಣೆ ಮಾಡಲಾಗಿದೆ ಎಂದು ತಮಿಳುನಾಡು ಆಡಳಿತ ತಿಳಿಸಿದೆ.

Leave a Comment

Your email address will not be published. Required fields are marked *