Ad Widget .

ದೇವರೆಂದು ಪೂಜಿಸಿದ ಆ ವಿಗ್ರಹ ದೇವರಲ್ಲ! ಹಾಗಾದ್ರೆ ಮತ್ತಿನ್ನೇನು? ಶಾಕ್ ನಲ್ಲಿ ಭಕ್ತಾಧಿಗಳು..!

ಸಮಗ್ರ ನ್ಯೂಸ್: ಇಷ್ಟು ದಿನ ದೇವರು ಅಂತ ಆರಾಧಿಸಿದ್ದು ದೇವರೇ ಅಲ್ಲ ಎಂದು ತಿಳಿದರೆ ಯಾರಿಗೇ ಆಗಲಿ, ಶಾಕ್ ಆಗೋದು ಖಂಡಿತ. ಇಂತಹುದೇ ಒಂದು ಅತಿ ವಿಚಿತ್ರ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ಪೆರಿಯೇರಿ ಗ್ರಾಮದಲ್ಲಿರುವ ದೇವಾಲಯವೊಂದರಲ್ಲಿ ಆರಾಧಿಸುತ್ತಿದ್ದ ತಲೈವೆಟ್ಟಿ ಮುನಿಯಪ್ಪನ್ ದೇವರು ಇದೀಗ ಬುದ್ಧ ಎಂದು ಸಾಬೀತಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ದೇವಾಲಯದಲ್ಲಿ ಬುದ್ಧನ ಶಿಲ್ಪವಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆಗೆ ಮದ್ರಾಸ್ ಹೈಕೋರ್ಟ್ ಖಡಕ್ ಆದೇಶ ನೀಡಿದೆ.

Ad Widget . Ad Widget . Ad Widget .

ತಲೈವೆಟ್ಟಿ ಮುನಿಯಪ್ಪನ್ ದೇವಾಲಯದಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಪೂಜೆ, ಆಚರಣೆಗಳನ್ನು ನಿಷೇಧಿಸಿ ಮದ್ರಾಸ್ ಹೈಕೋರ್ಟ್ ಆದೇಶ ಪ್ರಕಟಿಸಿದೆ. ಅಲ್ಲದೇ ದೇವಾಲಯದ ಪ್ರಾಂಗಣದಲ್ಲಿ ಬುದ್ಧನ ಶಿಲ್ಪ ಇರುವ ಕುರಿತು ಬೋರ್ಡ್ ಹಾಕಲು ಸಹ​ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಮದ್ರಾಸ್ ಹೈಕೋರ್ಟ್​ ನಿರ್ದೇಶನ ನೀಡಿದೆ.

ತಲವೆಟ್ಟಿ ಮುನಿಯಪ್ಪನ್ ದೇವಸ್ಥಾನದ ಕುರಿತು ಸಮಗ್ರ ಸಂಶೋಧನೆ ನಡೆಸಿದ ಪುರಾತತ್ತ್ವ ಇಲಾಖೆ ದೇಗುಲದಲ್ಲಿರುವ ದೇವರ ಮೂರ್ತಿಯು ಬುದ್ಧನ ಮೂರ್ತಿಯ ಲಕ್ಷಣಗಳನ್ನು ಹೋಲುತ್ತದೆ ಎಂದುನ್ಯಾಯಾಲಯಕ್ಕೆ ವರದಿ ನೀಡಿದೆ.

ದೇವರ ಮೂರ್ತಿಯು ಕಮಲದ ಮೇಲೆ ಕುಳಿತು ಅರ್ಧಪದ್ಮಾಸನ ಮುದ್ರೆಯಲ್ಲಿದೆ. ಅಲ್ಲದೇ, ಇತರೆಡೆ ಬುದ್ಧನ ಮೂರ್ತಿಗಳಿಗೆ ಇರುವಂತೆ ಗುಂಗುರು ಕೂದಲನ್ನು ಹೊಂದಿದೆ. ಹೀಗಾಗಿ ಮೂರ್ತಿಯ ಎಲ್ಲ ಲಕ್ಷಣಗಳನ್ನೂ ಆಧರಿಸಿ ಅದು ತಲವೆಟ್ಟಿ ಮುನಿಯಪ್ಪನ್ ದೇವರಲ್ಲ, ಬದಲಿಗೆ, ಬುದ್ಧನ ವಿಗ್ರಹ ಎಂದು ಪುರಾತತ್ತ್ವ ಇಲಾಖೆ ವರದಿ ನೀಡಿದೆ.

ಈ ವರದಿಯನ್ನು ಆಧರಿಸಿದ ನ್ಯಾಯಾಲಯ ಇನ್ಮೇಲೆ ತಲವೆಟ್ಟಿ ಮುನಿಯಪ್ಪನ್ ದೇವರು ಎಂದು ಪೂಜಿಸುವಂತಿಲ್ಲ. ಈ ದೇವಸ್ಥಾನದಲ್ಲಿರುವ ದೇವರನ್ನು ಬುದ್ಧನ ವಿಗ್ರಹ ಎಂದೇ ಪೂಜಿಸಬಹುದು ಎಂದು ತೀರ್ಪಿತ್ತಿದೆ. ಜೊತೆಗೆ ದೇಗುಲದಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಪೂಜೆ, ಆಚರಣೆಗಳನ್ನು ನಡೆಸದಿರುವಂತೆ ನಿರ್ದೇಶನ ನೀಡಿದೆ.

Leave a Comment

Your email address will not be published. Required fields are marked *