ಸಮಗ್ರ ನ್ಯೂಸ್: ಭಾರತೀಯ ರಿಸರ್ವ್ ಬ್ಯಾಂಕ್ (RBI) ಬುಧವಾರ ತನ್ನ ಪ್ರಮುಖ ರೆಪೊ ದರವನ್ನು 35 ಬೇಸಿಸ್ ಪಾಯಿಂಟ್‌ಗಳಿಂದ ಶೇ 6.25 ಕ್ಕೆ ಹೆಚ್ಚಿಸಿದೆ. ಹಣದುಬ್ಬರ ನಿಯಂತ್ರಣ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್ ಬಿಐ ಹೇಳಿದ್ದು, ಈ ನಡುವೆ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಾಗುವ ಆತಂಕ ಎದುರಾಗಿದೆ.
ಕೇಂದ್ರ ಬ್ಯಾಂಕ್‌ನ ಇತ್ತೀಚಿನ ನಿರ್ಧಾರವು ಆರ್‌ಬಿಐ ರೆಪೋ ದರಗಳನ್ನು ಏರಿಕೆ ಮಾಡಿರುವುದರಿಂದ ಗೃಹ ಸಾಲ, ಕಾರಿನ ಸಾಲ ಸೇರಿದಂತೆ ಇತರ ಸಾಲಗಳ ಇಎಂಐ ಏರಿಕೆಯಾಗುವ ಸಾಧ್ಯತೆ ಇದೆ. ಆರ್‌ಬಿಐ ದರ ಏರಿಕೆ ಮಾಡಿದ ಬೆನ್ನಲ್ಲೇ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿಯನ್ನು ಹೆಚ್ಚಿಸುತ್ತವೆ. ಇದರಿಂದ ಸಾಲಗಳ ಮಾಸಿಕ ಕಂತು ಹೆಚ್ಚಲಿದೆ.
ಆರ್‌ಬಿಐ ಈ ಹಿಂದೆಯೂ ನಾಲ್ಕು ಬಾರು ದಿಡೀರ್ ಆಗಿ ರೆಪೋ ದರ ಏರಿಕೆ ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ ಅವರ ನೇತೃತ್ವದಲ್ಲಿ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ನಿರ್ಧಾರವನ್ನು ಪ್ರಕಟಿಸಿದೆ. ಸೋಮವಾರದಿಂದ ಮೂರು ದಿನಗಳ ಕಾಲ ಚರ್ಚಿಸಿದ ಹಣಕಾಸು ಸಮಿತಿ (ಎಂಪಿಸಿ) 5-1 ಬಹುಮತದಿಂದ ಬಡ್ಡಿದರವನ್ನು 35 ಮೂಲಾಂಕಗಳಷ್ಟು ಹೆಚ್ಚಿಸಲು ನಿರ್ಧರಿಸಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಿದರು.