ಸಮಗ್ರ ನ್ಯೂಸ್: ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಈಗಾಗಲೇ ಉದ್ಯೋಗ ಕಡಿತದ ಪರ್ವ ಆರಂಭವಾಗಿದ್ದು, ಟ್ವಿಟ್ಟರ್, ಮೆಟಾ, ಸಿಸ್ಕೋ ಮೊದಲಾದ ಕಂಪನಿಗಳು ತಮ್ಮ ಸಹಸ್ರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ.
ಭಾರತದಲ್ಲಿ ಈಗಾಗಲೇ ಸ್ಟಾರ್ಟ್ ಅಪ್ ಕಂಪನಿಗಳಾದ ಬೈಜೂಸ್ ಹಾಗೂ ಝೋಮ್ಯಾಟೋ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡುತ್ತಿದ್ದು, ಇದೀಗ ಓಯೋ ಹೋಟೆಲ್ಸ್ ಅಂಡ್ ಪ್ರೈವೇಟ್ ಲಿಮಿಟೆಡ್ ಇದೇ ಹಾದಿ ಹಿಡಿಯುತ್ತಿದೆ.
ಓಯೋ 600 ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ತೀರ್ಮಾನಿಸಿದ್ದು, ಒಟ್ಟು 3,700 ಉದ್ಯೋಗಿಗಳ ಪೈಕಿ ಶೇಕಡಾ 10ರಷ್ಟು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಆದರೆ ನಿರ್ವಹಣಾ ತಂಡಕ್ಕೆ ಹೊಸದಾಗಿ 250 ಮಂದಿಯನ್ನು ನೇಮಿಸಿಕೊಳ್ಳುವುದಾಗಿ ಓಯೋ ತಿಳಿಸಿದೆ.