Ad Widget .

ಯುವಕನ ಬೆತ್ತಲೆ ವೀಡಿಯೋ ಇಟ್ಟುಕೊಂಡೇ ಚಿನ್ನ, ಕಾರು, ಬೈಕ್ ಖರೀದಿಸಿದ ವಂಚಕಿ

ಸಮಗ್ರ ನ್ಯೂಸ್: ಫೇಸ್‌ಬುಕ್‌ನಲ್ಲಿ ಯುವಕನನ್ನು ಪರಿಚಯ ಮಾಡಿಕೊಂಡು, ಆತನಿಂದ ಬೆತ್ತಲೆ ವೀಡಿಯೋ ಬಳಸಿಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ 40 ಲಕ್ಷ ರೂ. ಪಡೆದು ವಂಚಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮ ಪರಮೇಶ್ವರ್ ಹಿಪ್ಪರಗಿ ಎಂಬ ಯುವಕ ವಂಚನೆಗೆ ಒಳಗಾದ ವ್ಯಕ್ತಿ. ಈತನ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಮಹಿಳೆಯೊಬ್ಬಳು 40 ಲಕ್ಷ ಪಡೆದು ವಂಚಿಸಿದ್ದಳು. ಈ ಪ್ರಕರಣವನ್ನು ವಿಜಯಪುರ ಸಿಇಎನ್‌ ಪೊಲೀಸರು ಭೇದಿಸಿ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Ad Widget . Ad Widget .

ಹಾಸನ ಮೂಲದ ಮಂಜುಳಾ ಎಂಬಾಕೆ ಫೇಸ್‌ಬುಕ್‌ ಫ್ರೆಂಡ್‌ ಆಗಿ ಯುವಕನನ್ನು ವಂಚಿಸಿದ್ದಳು. ಇದಕ್ಕೆ ಆಕೆಯ ಪತಿಯೇ ಸಾಥ್‌ ನೀಡಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ. ಪತಿ ಸ್ವಾಮಿ ಹಾಗೂ ತಾನು ಸೇರಿಯೇ ಈ ಯುವಕನ ಬೆತ್ತಲೆ ವೀಡಿಯೋ ಇಟ್ಟುಕೊಂಡು ವಂಚನೆ ಮಾಡಿದ್ದೇವೆ ಎಂದು ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ.

ಸಂತ್ರಸ್ತ ಯುವಕನಿಗೆ ಬೆತ್ತಲೆ ಸ್ನಾನ ಮಾಡುವಂತೆ ಒತ್ತಾಯಿಸಿ ವೀಡಿಯೋ ಮಾಡಿಕೊಂಡಿದ್ದ ವಂಚಕರು ಬಳಿಕ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ. ವಂಚಿಸಿ 40 ಲಕ್ಷ ಹಣ ತನ್ನ ಫೆಡರಲ್ ಬ್ಯಾಂಕ್ ಅಕೌಂಟ್‌ಗೆ ಹಾಕಿಸಿಕೊಂಡಿದ್ದಳು. ಆ ಹಣದಲ್ಲಿ 100 ಗ್ರಾಂ ಬಂಗಾರ, ಹುಂಡೈ ಕಾರ್, ಬೈಕ್ ಖರೀದಿ ಮಾಡಿದ್ದಳು. ಜೊತೆಗೆ ಊರಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಳು. ಮಂಜುಳಾ ಹಾಗೂ ಪತಿ ಸ್ವಾಮಿ ಬಂಧನದ ಬಳಿಕ ಅಸಲಿ ಪ್ರಕರಣ ಬಯಲಾಗಿದೆ. ಈ ಸಂಬಂಧ ವಿಜಯಪುರ ಸಿಇಎನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *