ಸಮಗ್ರ ನ್ಯೂಸ್: ಭಾರತೀಯ ಷೇರು ಮಾರುಕಟ್ಟೆ ಸಾರ್ವಕಾಲಿಕ ಏರಿಕೆ ಕಂಡಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಮತ್ತೊಮ್ಮೆ ಸಾರ್ವಕಾಲಿಕ ಉನ್ನತ ಮಟ್ಟಕ್ಕೆ ತಲುಪಿವೆ. ಇದರೊಂದಿಗೆ ಹೊಸ ದಾಖಲೆ ಸಹ ನಿರ್ಮಾಣವಾಗಿದೆ. ಸೆನ್ಸೆಕ್ಸ್ ಚೊಚ್ಚಲ ಬಾರಿಗೆ 63 ಸಾವಿರದ ಗಡಿ ದಾಟಿದರೆ, ನಿಫ್ಟಿ 18800ರ ಗಡಿ ದಾಟಿದೆ. ಇದರೊಂದಿಗೆ ಇಂದಿನ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡರಲ್ಲೂ ಏರಿಳಿತ ಕಂಡಿದೆ.
ಸೆನ್ಸೆಕ್ಸ್ ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟ 63,303.01 ಕ್ಕೆ ತಲುಪಿದೆ. ಸೆನ್ಸೆಕ್ಸ್ 417.81 (0.67%) ಪಾಯಿಂಟ್ ಏರಿಕೆಯೊಂದಿಗೆ 63,099.65ಕ್ಕೆ ಕೊನೆಗೊಂಡಿತು. ಸೆನ್ಸೆಕ್ಸ್‌ನ 52 ವಾರಗಳ ಕನಿಷ್ಠ ಬೆಲೆ 50,921.22 ಆಗಿದೆ. ಇತ್ತ ನಿಫ್ಟಿಯಲ್ಲೂ ಜಿಗಿತ ಕಂಡು ಬಂದಿದೆ. ನಿಫ್ಟಿ ಸಾರ್ವಕಾಲಿಕ ಗರಿಷ್ಠ 18,816.05 ಮಟ್ಟವನ್ನು ತಲುಪಿತ್ತು. 140.30 (0.75%) ಪಾಯಿಂಟ್ ಏರಿಕೆಯೊಂದಿಗೆ ನಿಫ್ಟಿ 18,758.35ಕ್ಕೆ ವಹಿವಾಟನ್ನು ಅಂತ್ಯಗೊಳಿಸಿದೆ. ನಿಫ್ಟಿಯ 52 ವಾರದ ಕನಿಷ್ಠ ಪಾಯಿಂಟ್ 15,183.40 ಆಗಿದೆ.
2022ರ ದ್ವಿತೀಯಾರ್ಧದಲ್ಲಿ ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಉತ್ತಮ ಕಾರ್ಯಕ್ಷಮತೆ ಕಂಡು ಬಂದಿದೆ. ಪ್ರಬಲವಾದ ಮೂಲಭೂತ ಅಂಶಗಳು ಮತ್ತು ದೇಶೀಯ ನಿಧಿಗಳಿಂದ ಬಲವಾಗಿ ಬೆಂಬಲಿತವಾಗಿರುವುದರಿಂದ ಷೇರು ಮಾರುಕಟ್ಟೆ ಚೇತರಿಕೆಯ ದಿಶೆಯಲ್ಲಿ ಸಾಗುತ್ತಿದೆ.