Ad Widget .

ಮುಖ, ಮೈ ಮೇಲೆಲ್ಲಾ ಕೂದಲು!
ಅಪರೂಪದ ಕಾಯಿಲೆಗೆ ತುತ್ತಾದ ಮಧ್ಯಪ್ರದೇಶದ ಯುವಕ

ಮಧ್ಯಪ್ರದೇಶ:ಮಧ್ಯಪ್ರದೇಶದ ರತ್ಲಾಮ್‌ ಜಿಲ್ಲೆಯ ಚಿಕ್ಕ ಹಳ್ಳಿಯ ಲಲಿತ್ ಪಾಟಿದಾರ್ (17) ಎಂಬ ಯುವಕನೊಬ್ಬ ಅಪರೂಪದ ‘ವೆರ್‌ವುಲ್ಫ್ ಸಿಂಡ್ರೋಮ್’ ಕಾಯಿಲೆಯಿಂದ ಬಳಲುತ್ತಿದ್ದು, ಮುಖ ಸೇರಿ ದೇಹದ ತುಂಬೆಲ್ಲ ದಟ್ಟವಾದ ಕೂದಲು ಬೆಳೆಯುತ್ತಿವೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪಾಟಿದಾರ್ ಹುಟ್ಟಿನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದು, ಇಲ್ಲಿಯವರಗೆ ಕೇವಲ 50 ಜನರು ಮಾತ್ರ ಈ ಅಪರೂಪದ ಕಾಯಿಲೆಗೆ ತುತ್ತಾಗಿದ್ದಾರೆ ಎನ್ನಲಾಗಿದೆ.

Ad Widget . Ad Widget . Ad Widget .

ಈ ಕುರಿತು ಬೇಸರ ವ್ಯಕ್ತಪಡಿಸಿರುವ ಲಲಿತ್, ನನ್ನ ದೇಹ ಪೂರ್ತಿಯಾಗಿ ಕೂದಲು ಆವರಿಸಿಕೊಂಡಿದ್ದು, ನನ್ನ ಸಹಪಾಠಿಗಳು ನನ್ನನ್ನು ಕೋತಿ ಹುಡುಗ ಎಂದು ಕರೆಯುತ್ತಾರೆ ಮತ್ತು ಕಚ್ಚುವ ಭಯವಿದೆ ಎಂದು ಹೇಳುತ್ತಾರೆ. ನಾನು ಬೇರೆಯವರಂತೆ ಸಾಮಾನ್ಯವಾದ ಜೀವನ ಅನುಭವಿಸಲು ಸಾಧ್ಯವಾಗಿಲ್ಲ. ನಾನು ಚಿಕ್ಕವನಿದ್ದಾಗ ಆಗಾಗ ಜನರು ನನ್ನತ್ತ ಕಲ್ಲು ಎಸೆಯುತ್ತಿದ್ದರು ಎಂದಿದ್ದಾನೆ.

ಇನ್ನು ನಾನು ಪ್ರಾಣಿಯಂತೆ ಕಚ್ಚುತ್ತೇನೆ ಎಂದು ಮಕ್ಕಳು ಹೆದರುತ್ತಿದ್ದರು. ನಾನು ಹುಟ್ಟಿನಿಂದಲೇ ವೈದ್ಯರಿಂದ ಕ್ಷೌರ ಮಾಡಿಸಿಕೊಂಡಿದ್ದೇನೆ. ಆದರೆ ನನಗೆ 6 ಅಥವಾ 7 ವರ್ಷ ವಯಸ್ಸಿನವರೆಗೂ ಈ ವ್ಯತ್ಯಾಸದ ಬಗ್ಗೆ ತಿಳಿದಿರಲಿಲ್ಲ. ಬಳಿಕ ಇನ್ನೂ ನನ್ನ ದೇಹದಾದ್ಯಂತ ಕೂದಲು ಬರಲು ಪ್ರಾರಂಭವಾಯಿತು ಎಂದು ತಿಳಿಸಿದ್ದಾನೆ.

ಹೈಪರ್ಟ್ರಿಕೋಸಿಸ್‌ಗೆ (ವೆರ್‌ವುಲ್ಫ್ ಸಿಂಡ್ರೋಮ್’) ಯಾವುದೇ ಚಿಕಿತ್ಸೆ ಇಲ್ಲದಿರುವುದರಿಂದ, ಪಾಟಿದಾರ್ ಅವರು ಬ್ಲೀಚಿಂಗ್, ಕತ್ತರಿಸುವುದು, ಶೇವಿಂಗ್, ವ್ಯಾಕ್ಸಿಂಗ್, ಲೇಸರ್‌ಗಳು ಮತ್ತು ಇತರ ಕೂದಲು ತೆಗೆಯುವ ತಂತ್ರಗಳನ್ನು ಬಳಸುತ್ತಾರೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *