ಸಮಗ್ರ ನ್ಯೂಸ್: ದೇಶದ ಹೆಮ್ಮೆಯ ಟಾಟಾ ಗ್ರೂಪ್ ರಮೇಶ್ ಜೆ ಚೌಹಾನ್ ಮಾಲೀಕತ್ವದ ಬಿಸ್ಲೇರಿ ಇಂಟರ್‌ನ್ಯಾಶನಲ್ ಕಂಪನಿಯನ್ನು ಖರೀದಿಸುವ ಪ್ರಕ್ರಿಯೆಯಲ್ಲಿದ್ಧು ಒಟ್ಟು 7,000 ಕೋಟಿ ರೂ.ಗೆ ಈ ವಹಿವಾಟು ನಡೆದಿದೆ ಎನ್ನಲಾಗಿದೆ.
ಒಪ್ಪಂದದ ಭಾಗವಾಗಿ ಈಗಿನ ಆಡಳಿತ ಮಂಡಳಿಯು ಮುಂದಿನ ಎರಡು ವರ್ಷಗಳ ಕಾಲ ಮುಂದುವರಿಯಲಿದೆ.
ಟಾಟಾ ಸಮೂಹವು ತನ್ನ ಟಾಟಾ ಕನ್‌ಸ್ಯೂಮರ್ ಪ್ರಾಡಕ್ಟ್ಸ್ (TCPL) ಕಂಪನಿಯ ಅಡಿಯಲ್ಲಿ ತನ್ನ ಪ್ಯಾಕೇಜ್ಡ್ ಮಿನರಲ್ ವಾಟರ್ ಮಾರಾಟವನ್ನು ನಡೆಸುತ್ತಿದೆ. ಹಿಮಾಲಯನ್ ಮತ್ತು ಟಾಟಾ ಕಾಪ್ಪರ್ ಪ್ಲಸ್ ವಾಟರ್, ಟಾಟಾ ಗ್ಲೊಕೊ+ ಎಂಬ ಬ್ರಾಂಡ್‌ಗಳಲ್ಲಿ ಪ್ಯಾಕೇಜ್ಡ್ ಕುಡಿಯುವ ನೀರಿನ ಬಾಟಲಿಗಳನ್ನು ಪ್ರಸ್ತುತ ಮಾರಾಟ ಮಾಡುತ್ತಿದೆ.
ಟಾಟಾ ಸಮೂಹವು ಬಿಸ್ಲೇರಿಯನ್ನು ಖರೀದಿಸುವುದರೊಂದಿಗೆ, ಅದಕ್ಕೆ ದಿನ ಬಳಕೆಯ ವಸ್ತುಗಳ ಮಾರಾಟ ವಲಯದಲ್ಲಿ ದೊಡ್ಡ ಮುನ್ನಡೆ ಲಭಿಸಿದೆ. ಬಿಸ್ಲೇರಿ ಸಂಸ್ಥೆಯು ತನ್ನ Thums Up ಮತ್ತು Limca ಮತ್ತು Gold Spotನಂತಹ ಪಾನೀಯ ಬ್ರ್ಯಾಂಡ್‌ಗಳನ್ನು 90ರ ದಶಕದಲ್ಲಿ ಕೋಕಾ ಕೋಲಾಕ್ಕೆ ಮಾರಾಟ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.