Ad Widget .

ಶಾಕಿಂಗ್ ಸಮಾಚಾರ : ತಂದೆಯೊಂದಿಗೆ ಚಿತೆಗೇರಿದ ಪುತ್ರ | ಬಂಟ್ವಾಳದಲ್ಲೊಂದು ಹೃದಯ ವಿದ್ರಾವಕ ಘಟನೆ

ಪುತ್ತೂರು : ಜೂ 2 : ಕೊವೀಡ್ ನಿಂದ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರ ನಡೆಸುತ್ತಿರುವಾಗ ಅರೋಗ್ಯ ವ್ಯತ್ಯಾಸವಾಗಿ ಮಗನೂ ಮೃತಪಟ್ಟ ಹೃದಯವಿದ್ರಾವಕ ಘಟನೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದಲ್ಲಿ ಜೂ 2 ರಂದು ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪುಣಚ ಗ್ರಾಮದ ಬೈಲುಗುತ್ತು ಕೊಪ್ಪಳ ನಿವಾಸಿ ಪ್ರೊಪೆಸರ್ ಭುಜಂಗ ಶೆಟ್ಟಿ ಹಾಗೂ ಅವರ ಪುತ್ರ ಶೈಲೇಶ್ ಒಂದೇ ದಿನ ಅನಾರೋಗ್ಯ ತುತ್ತಾಗಿ ಮೃತ ಪಟ್ಟವರು. ಭುಜಂಗ ಶೆಟ್ಟಿಯವರಿಗೆ ಇತ್ತೀಚಿಗೆ ಕೊರೊನಾ ಸೋಂಕು ತಗುಲಿತ್ತು, ಆದರೇ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃತ ಪಟ್ಟಿದ್ದರು . ಭುಜಂಗ ಶೆಟ್ಟಿಯವರು ಕೆಪಿಟಿ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ನಿವೃತ್ತಿ ಹೊಂದಿದ್ದರು.
ಇಂದು ಅವರ ಅಂತ್ಯ ಸಂಸ್ಕಾರ ವಿಧಿ ವಿಧಾನಗಳು ಪುಣಚದ ಅವರ ಮನೆಯಲ್ಲಿ ಕೊವೀಡ್ ನಿಯಾಮಾವಳಿಯಂತೆ ನಡೆಸಲಾಗುತ್ತಿತ್ತು. ಈ ಸಂದರ್ಭ ಅವರ ಪುತ್ರ ಶೈಲೇಶ್ ರವರು ಭಾಗಿಯಾಗಿದ್ದರು . ಅಂತಿಮ ಸಂಸ್ಕಾರದ ಪ್ರಕ್ರಿಯೆಗಳು ನಡೆಯುತ್ತಿರುವಾಗಲೇ ಶೈಲೇಶ್ ರವರ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ಕೂಡಲೇ ಅವರು ಮನೆಯತ್ತ ಹೋಗಿದ್ದು , ಮನೆಯ ಅಂಗಳ ತಲುಪುತ್ತಲೇ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಕೂಡಲೇ ಪುಣಚದಲ್ಲಿನ ವೈದ್ಯರೂ ಶೈಲೇಶ್ ಅವರನ್ನು ಪರೀಕ್ಷೆ ನಡೆಸಿದರು . ಬಳಿಕ ಅವರನ್ನು ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆ ತರಲಾಯಿತು.
ಆದರೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ಸಕ್ಕರೆ ಖಾಯಿಲೆಯಿಂದ ಬಳಳುತಿದ್ದ ಅವರು ತಂದೆಯ ಮರಣದ ವಾರ್ತೆ ಸಿಕ್ಕ ಬಳಿಕ ಆಹಾರ ಸೇವಿಸಿರಲಿಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ ಲೋ ಶುಗರ್ ಅಥವಾ ಹೃದಯಾಘಾತಕ್ಕೆ ತುತ್ತಾಗಿ ಅವರ ಸಾವು ಸಂಭವಿಸಿರಬಹುದು ಎಂದು ಸಂಶಯಿಸಲಾಗಿದೆ. ಮೃತ ಶೈಲೇಶ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಒಂದೇ ದಿನ ಇಬ್ಬರು ಸದಸ್ಯರನ್ನು ಕಳಕೊಂಡ ಮನೆಯ ಇತರ ಸದಸ್ಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

Ad Widget . Ad Widget . Ad Widget .

Leave a Comment

Your email address will not be published. Required fields are marked *