ಸಮಗ್ರ ನ್ಯೂಸ್: ಮಂಗಳೂರು ಆಟೋ ಬಾಂಬ್ ಸ್ಪೋಟ ಪ್ರಕರಣದ ಶಂಕಿತ ಉಗ್ರ ಶಾರಿಕ್ ತನ್ನ ವಾಟ್ಸಪ್ ಡಿಪಿಯಲ್ಲಿ ಈಶ್ವರನ ಫೋಟೋ ಇಟ್ಟುಕೊಂಡಿದ್ದ ಎಂದು ಮೊಬೈಲ್ ತರಬೇತಿ ಕೇಂದ್ರದ ಮಾಲೀಕ ಪ್ರಸಾದ್ ತಿಳಿಸಿದ್ದಾರೆ.
ಮೈಸೂರಿನ ಕೆ.ಆರ್. ಮೊಹಲ್ಲಾದಲ್ಲಿ ಮೊಬೈಲ್ ತರಬೇತಿ ಕೇಂದ್ರದಲ್ಲಿ ಮೊಬೈಲ್ ರಿಪೇರಿ ಬಗ್ಗೆ ತರಬೇತಿ ಪಡೆಯಲು ಬಂದಿದ್ದ ಶಾರಿಕ್ ಧಾರವಾಡ ಶೈಲಿ ಕನ್ನಡದಲ್ಲಿ ಮಾತನಾಡುತ್ತಿದ್ದ. ಧಾರವಾಡದ ಪ್ರೇಮ್ ರಾಜ್ ಎಂಬ ಹೆಸರಿನಲ್ಲಿ ದಾಖಲೆ ನೀಡಿ ತರಬೇತಿ ಪಡೆಯುತ್ತಿದ್ದ ಎಂದು ಪ್ರಸಾದ್ ಮಾಹಿತಿ ನೀಡಿದ್ದಾರೆ.
ಶಂಕಿತ ಉಗ್ರ ಶಾರಿಕ್ ವಾಟ್ಸಪ್ ಡಿಪಿಯಲ್ಲಿ ಇಶಾ ಫೌಂಡೇಶನ್ ಶಿವನ ಫೋಟೋ ಇಟ್ಟುಕೊಂಡಿದ್ದ. ಈತನ ನಡುವಳಿಕೆಯಲ್ಲಿ ಮುಸ್ಲಿಂ ಅಂತ ಗೊತ್ತಾಗುತ್ತಿರಲಿಲ್ಲ. ವೇಷ ಭೂಷಣ, ಬಟ್ಟೆ, ನಡೆಯಲ್ಲಿ ಮುಸ್ಲಿಂ ಅಂತ ಗೊತ್ತಾಗುತ್ತಿರಲಿಲ್ಲ. ಮೊಬೈಲ್ ತರಬೇತಿ ಕ್ಲಾಸ್ ಗೆ ಬಂದರೂ ಯಾವಾಗಲೂ ಬಾಗಿಲ ಕಡೆ ನೋಡುತ್ತಿದ್ದ.
ಮೊಬೈಲ್ ರಿಪೇರಿ ಕಲಿಯಲು 10 ಮೊಬೈಲ್ ಖರೀದಿಸಿದ್ದ ಶಾರೀಕ್ ಪೂರ್ಣ ಪ್ರಮಾಣದಲ್ಲಿ ಮೊಬೈಲ್ ತರಬೇತಿ ಪಡೆದಿರಲಿಲ್ಲ. ಇದೀಗ ಕೃತ್ಯ ಕಂಡು ನನಗೆ ಶಾಕ್ ಆಗಿದೆ. ಶಾರಿಕ್ ಕುರಿತು ಎಲ್ಲಾ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.