Ad Widget .

2023ನೇ ಸಾಲಿನ ಸಾರ್ವತ್ರಿಕ ರಜಾದಿನ ಪ್ರಕಟಿಸಿದ ರಾಜ್ಯ ಸರ್ಕಾರ| 17 ಪರಿಮಿತ ರಜೆ ಸೇರಿಸಿ ಆದೇಶ

ಸಮಗ್ರ ನ್ಯೂಸ್: 2023ನೇ ಸಾಲಿನಲ್ಲಿ ರಾಜ್ಯಾದ್ಯಂತ 19 ಸಾರ್ವತ್ರಿಕ ರಜೆ ಹಾಗೂ ಸರ್ಕಾರಿ ನೌಕರರಿಗೆ 17 ಪರಿಮಿತ ರಜಾ ದಿನಗಳನ್ನು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.

Ad Widget . Ad Widget .

2023ನೇ ಸಾಲಿನಲ್ಲಿ ರಾಜ್ಯಾದ್ಯಂತ 36 ಸಾರ್ವತ್ರಿಕ ಹಾಗೂ ಪರಿಮಿತ ರಜೆಗಳನ್ನು ಘೋಷಿಸಲಾಗಿದೆ. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ (15.01.2023), ಬಸವ ಜಯಂತಿ/ಅಕ್ಷಯ ತೃತೀಯ (23.04.2023) ಮತ್ತು ನರಕ ಚತುರ್ದಶಿ (12.11.2023) ಹಾಗೂ ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆ (14.10.2023) ಹಾಗೂ ನಾಲ್ಕನೇ ಶನಿವಾರದಂದು ಬರುವ ಖುತುಬ್-ಎ-ರಂಜಾನ್ (22.04.2023) ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ (28.10.2023) ಸೇರಿಸಲಾಗಿಲ್ಲ.

Ad Widget . Ad Widget .

01.04.2023 ವಾಣಿಜ್ಯ ಬ್ಯಾಂಕುಗಳ ಹಾಗೂ ಸಹಕಾರಿ ಬ್ಯಾಂಕುಗಳ ವಾರ್ಷಿಕ ಮುಕ್ತಾಯದ ದಿನ ಆಗಿರುವುದರಿಂದ, ಆ ದಿನದಂದು ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕುಗಳಿಗೆ ಮಾತ್ರ ರಜಾ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

03.09.2023 (ಭಾನುವಾರ) ಕೈಲ್‌ ಮೂಹೂರ್ತ, 18.10.2023 (ಬುಧವಾರ) ತುಲಾ ಸಂಕ್ರಮಣ ಹಾಗೂ 28.11.2023 (ಮಂಗಳವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

ಸಾರ್ವತ್ರಿಕ ರಜಾ ದಿನಗಳ ಪಟ್ಟಿ:

26.01.2023- ಗಣರಾಜ್ಯೋತ್ಸವ
18.02.2023- ಮಹಾ ಶಿವರಾತ್ರಿ
22.03.2023- ಯುಗಾದಿ ಹಬ್ಬ
3.04.2023- ಮಹಾವೀರ ಜಯಂತಿ
7.04.2023- ಗುಡ್ ಫ್ರೈಡೆ
14.04.2023- ಡಾ.ಬಿಆರ್.ಅಂಬೇಡ್ಕರ್ ಜಯಂತಿ
1.05.2023- ಕಾರ್ಮಿಕ ದಿನಾಚರಣೆ
29.06.2023- ಬಕ್ರೀದ್
29.07.2023- ಮೊಹರಂ ಕಡೆ ದಿನ
15.08.2023- ಸ್ವಾತಂತ್ರ್ಯ ದಿನಾಚರಣೆ
18.09.2023- ಗಣೇಶ ಚತುರ್ಥಿ
28.09.2023- ಈದ್ ಮಿಲಾದ್
2.10.2023- ಗಾಂಧಿ ಜಯಂತಿ
23.10.2023- ಮಹಾನವಮಿ, ಆಯುಧ ಪೂಜೆ
24.10.2023- ವಿಜಯ ದಶಮಿ
1.11.2023- ಕನ್ನಡ ರಾಜ್ಯೋತ್ಸವ
14.11.2023- ಬಲಿಪಾಡ್ಯಮಿ, ದೀಪಾವಳಿ
30.11.2023- ಕನಕದಾಸ ಜಯಂತಿ
25.12.2023- ಕ್ರಿಸ್ಮಸ್
ಪರಿಮಿತ ರಜಾ ದಿನಗಳ ಪಟ್ಟಿ:

30.01.2023- ಮಧ್ಯ ನವಮಿ
7.03.2023- ಷಬ್- ಎ- ಬರಾತ್
8.03.2023- ಹೋಳಿ ಹಬ್ಬ.
30.03.2023- ಶ್ರೀ ರಾಮನವಮಿ
18.04.2023- ಷಬ್-ಎ-ಖದರ್
21.04.2023- ಜಮತ್-ಉಲ್-ವಿದಾ
25.04.2023- ಶ್ರೀ ಶಂಕರಾಚಾರ್ಯ ಜಯಂತಿ, ಶ್ರೀ ರಾಮಾನುಜಾಚಾರ್ಯ ಜಯಂತಿ
5.2023-ಬುದ್ಧ ಪೂರ್ಣಿಮ
25.08.2023- ವರಮಹಾಲಕ್ಷ್ಮಿ ವ್ರತ
29.08.2023- ಋಗ್ ಉಪಕರ್ಮ, ತಿರು ಓಣಂ
30.08.2023- ಯಜುರ್ ಉಪಕರ್ಮ
31.08.2023- ಬ್ರಹ್ಮಶ್ರೀ ನಾರಾಯಣಗುರು ಜಯಂತಿ
6.09.2023- ಶ್ರೀ ಕೃಷ್ಣ ಜನ್ಮಾಷ್ಟಮಿ
8.09.2023- ಕನ್ಯಾ ಮರಿಯಮ್ಮ ಜಯಂತಿ
18.10.2023- ತುಲಾ ಸಂಕ್ರಮಣ
27.11.202- ಗುರು ನಾನಕ್ ಜಯಂತಿ
28.11.2023- ಹುತ್ತರಿ ಹಬ್ಬ
ನೂತನ ವರ್ಷಾರಂಭ (1.01.2023), ದೇವರ ದಾಸಿಮಯ್ಯ ಜಯಂತಿ (26.03.2023), ವಿಶ್ವ ಕರ್ಮ ಜಯಂತಿ (17.09.2023) ಮತ್ತು ಕ್ರಿಸ್‌ಮಸ್ ಈವ್ (24.12.2023). ಭಾನುವಾರದಂದು ಹಾಗು ಹೋಲಿ ಸ್ಯಾಟರ್ ಡೇ (8.04.2023) ಎರಡನೇ ಶನಿವಾರದಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿಲ್ಲ.

ಸೌರಮಾನ ಯುಗಾದಿ (14.04.2023) ಶುಕ್ರವಾರ ಡಾ.ಬಿ. ಆರ್. ಅಂಬೇಡ್ಕರ್ ಜಯಂತಿ, ಸ್ವರ್ಣಗೌರಿ ವ್ರತ (18.09.2023) ಸೋಮವಾರ ವರಸಿದ್ಧಿ ವಿನಾಯಕ ವ್ರತ ಹಾಗೂ ಅನಂತ ಪದ್ಮನಾಭ ವ್ರತ (28.09.2023) ಗುರುವಾರ ಈದ್-ಮಿಲಾದ್ ನಿಮಿತ್ತ ಘೋಷಿಸಿರುವ ಸಾರ್ವತ್ರಿಕ ರಜಾ ದಿನಗಳಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.

Leave a Comment

Your email address will not be published. Required fields are marked *