ಸಮಗ್ರ ನ್ಯೂಸ್: ಮೈಸೂರು ವಿಶ್ವವಿದ್ಯಾಲಯದ ಪಠ್ಯ ಪುಸ್ತಕ ಇದೀಗ ಚರ್ಚೆಗೆ ಗ್ರಾಸವಾಗಿದೆ. ಬಿಎ ಪದವಿಯ ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕದ ಅಧ್ಯಾಯವೊಂದರಲ್ಲಿ ಏಡ್ಸ್, ಕ್ಯಾನ್ಸರ್ಗೆ ಸ್ವಮೂತ್ರಪಾನವೇ ಮದ್ದು ಎಂದು ಬರೆಯಲಾಗಿದೆ.
ಅಲ್ಲದೇ ಮೂತ್ರ ಚಿಕಿತ್ಸೆಯು ಪ್ರಕೃತಿ ಚಿಕಿತ್ಸೆಯ ಒಂದು ಭಾಗವಾಗಿದ್ದು, ಸ್ವಮೂತ್ರಪಾನದಿಂದ ಕಣ್ಣು, ಕಿವಿ, ಹಲ್ಲು, ಚರ್ಮ ರೋಗಗಳನ್ನು ನಿಯಂತ್ರಿಸಬಹುದು ಎಂದು ಹೇಳಲಾಗಿದೆ. ಇದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮದ ಅನ್ವಯ ಈ ಅಧ್ಯಾಯ ಸೇರ್ಪಡೆಯಾಗಿದೆ.
ಚಿಕಿತ್ಸೆಯ ಮಹತ್ವ ಮತ್ತು ವಿವರಿಸಲು ಲೇಖನದಲ್ಲಿ ಹಲವು ಸಾಧಕರ ಹೆಸರು ಬಳಸಿಕೊಳ್ಳಲಾಗಿದೆ. ಭಾರತದ ಮಾಜಿ ಪ್ರಧಾನಿ ದಿವಂಗತ ಮೊರಾರ್ಜಿ ದೇಸಾಯಿ ಅವರು ಈ ಪದ್ದತಿಯನ್ನು ಅನುಸರಿಸುತ್ತಿದ್ದರು ಎಂದು ಬರೆಯಲಾಗಿದೆ. ಸಂಸ್ಕೃತ ಸಾಹಿತ್ಯ ನಿಧಿಯಲ್ಲಿ ಶಿವಾಂಬು ಸಂಹಿತೆಯಲ್ಲಿ ಈ ಬಗ್ಗೆ ಮಾಹಿತಿ ದೊರೆಯುತ್ತದೆ ಎಂದು ಉಲ್ಲೇಖಿಸಲಾಗಿದೆ.
ಸ್ವಮೂತ್ರ ಪಾನವಲ್ಲದೇ, ಗೋಮೂತ್ರದ ಮಹತ್ವವನ್ನು ಸಾರಲಾಗಿದೆ. ಪ್ರೊ.ಭೈರಪ್ಪ ಬರೆದಿರುವ ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕದಲ್ಲಿ ಈ ಬಗ್ಗೆ ಬರೆಯಲಾಗಿದ್ದು, ನಾವು ಪಾರಂಪರಿಕ ವೈದ್ಯ ಪದ್ಧತಿಯ ಯೋಗ,ಯುನಾನಿ ಇತರೆ ವಿಧಾನಗಳಷ್ಟೇ ಪಾಠ ಮಾಡುತ್ತಿದ್ದೇವೆ ಎಂದು ಪ್ರಾಧ್ಯಾಪಕರು ಹೇಳಿದ್ದಾರೆ.