ನವದೆಹಲಿ: ಭಾರತವು ಎಲ್ಲಾ ಸ್ಮಾರ್ಟ್ ಸಾಧನಗಳಿಗಾಗಿ ಯುಎಸ್ಬಿ ಮಾದರಿಯ ಸಿ ಚಾರ್ಜಿಂಗ್ ಪೋರ್ಟ್‌ಗೆ ಸ್ಥಳಾಂತರಗೊಳ್ಳಲಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕೇಂದ್ರ ಸರ್ಕಾರವು ರಚಿಸಿರುವ ಅಂತರ್ ಸಚಿವಾಲಯದ ಕಾರ್ಯಪಡೆಯ ಸಭೆಯಲ್ಲಿ ಪಾಲುದಾರರು ಒಮ್ಮತಕ್ಕೆ ಬಂದ ಬಳಿಕ ಎಲ್ಲಾ ಸ್ಮಾರ್ಟ್ ಸಾಧನಗಳಿಗಾಗಿ ಯುಎಸ್ಬಿ ಮಾದರಿಯ ಸಿ ಚಾರ್ಜಿಂಗ್ ಪೋರ್ಟ್‌ಗೆ ಸ್ಥಳಾಂತರಗೊಳ್ಳಲಿದೆ ಎಂದು ತೀರ್ಮಾನಿಸಲಾಗಿದೆ ಎಂದರು.
ಇನ್ನು ‘ಸ್ಮಾರ್ಟ್ಫೋನ್‌ಗಳು, ಟ್ಯಾಬ್‌ಗಳು ಮತ್ತು ಲ್ಯಾಪ್‌ಟಾಪಗಳಂತಹ ಎಲೆಕ್ಟ್ರಾನಿಕ್ ಸಾಧನಗಳಿಗೆ ಚಾರ್ಜಿಂಗ್ ಪೋರ್ಟ್ ಆಗಿ ಯುಎಸ್ಬಿ ಟೈಪ್ – ಸಿ ಅನ್ನು ಅಳವಡಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಮಧ್ಯಸ್ಥಗಾರರ ನಡುವೆ ವ್ಯಾಪಕ ಒಮ್ಮತ ಮೂಡಿದ್ದು, ಫೀಚರ್ ಫೋನ್‌ಗಳಿಗಾಗಿ ವಿಭಿನ್ನ ಚಾರ್ಜಿಂಗ್ ಪೋರ್ಟ್ ಅನ್ನು ಅಳವಡಿಸಿಕೊಳ್ಳಬಹುದು ಎಂದು ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.