Ad Widget .

ಇಂದು(ನ.8) ರಾಹುಗ್ರಸ್ತ ರಕ್ತಚಂದ್ರಗ್ರಹಣ| ಎಲ್ಲೆಲ್ಲಿ ಕಾಣಲಿದೆ ನೆರಳು ಬೆಳಕಿನಾಟ? ಸಂಪೂರ್ಣ ವಿವರ…

ಸಮಗ್ರ ನ್ಯೂಸ್: ಇಂದು ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸುತ್ತಿದೆ. ಕಳೆದ ವಾರವಷ್ಟೇ ಸೂರ್ಯಗ್ರಹಣದ ಜೊತೆಗೆ ಇದೀಗ ಚಂದ್ರಗ್ರಹಣದ ಆಗಮನವಾಗಿದೆ. ಕರ್ನಾಟಕ ಸೇರಿ ದೇಶದಲ್ಲೆಡೆ ಎಲ್ಲೆಲ್ಲಿ ಚಂದ್ರ ಗ್ರಹಣ ಗೋಚರಿಸಲಿದೆ ಎಂಬ ಮಾಹಿತಿ ‌ಇದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸೂರ್ಯಗ್ರಹಣದ 15ನೇ ದಿನಕ್ಕೆ ಚಂದ್ರಗ್ರಹಣ ಬರ್ತಿದೆ. ಗ್ರಹಣದ ವೇಳೆ ಚಂದ್ರ ಕೆಂಪುವರ್ಣದಿಂದ ಗೋಚರಿಸಲಿದ್ದಾನೆ. ಹೀಗಾಗಿ ಇದನ್ನ ರೆಡ್‌ಮೂನ್‌ ಗ್ರಹಣ ಅಂತಾ ಕರೆಯಲಾಗುತ್ತದೆ. ಹೀಗಾಗಿಯೇ ಈ ಗ್ರಹಣವೂ ಮಹತ್ವ ಪಡೆದುಕೊಂಡಿದೆ.

Ad Widget . Ad Widget . Ad Widget .

ಜಾಗತಿಕವಾಗಿ ಚಂದ್ರಗ್ರಹಣ ಆರಂಭದ ಕಾಲ ಮಧ್ಯಾಹ್ನ 2 ಗಂಟೆ 39 ನಿಮಿಷ ಅಂತಾ ಈಗಾಗಲೇ ನಿಗದಿಯಾಗಿದೆ. ಆದರೆ ಭಾರತದಲ್ಲಿ ಗ್ರಹಣ ಆರಂಭವಾಗೋದೇ ಸಂಜೆ 5.29ರ ಬಳಿಕ ಎನ್ನಲಾಗಿದೆ. ಗ್ರಹಣದ ಆರಂಭ ಕಾಲದಲ್ಲಂತೂ ಭಾರತದ ಯಾವುದೇ ಭಾಗದಲ್ಲೂ ಚಂದ್ರೋದಯ ಆಗಿರುವುದಿಲ್ಲ. ಹೀಗಾಗಿ ನಮಗೆ ಚಂದ್ರ ಗೋಚರವಾಗುವುದೇ ಗ್ರಹಣ ಮೋಕ್ಷಕಾಲದಲ್ಲಿ.

ಚಂದ್ರಗ್ರಹಣದ ಹಿನ್ನೆಲೆ ದೇಗುಲಗಳಲ್ಲಿ ವಿಶೇಷ ವ್ಯವಸ್ಥೆ
ಸೂತಕ ಆರಂಭದಿಂದ ಮೋಕ್ಷಕಾಲ ದವರೆಗೂ ಬಂದ್‌ ಆಗಲಿದ್ದು ಗ್ರಹಣ ಮುಗಿದ ನಂತರ ದೇವಾಲಯ ಶುದ್ಧೀ ಕಾರ್ಯ ನಡೆಸಿ ಪೂಜಾಕಾರ್ಯಗಳು ಪುನಾರಂಭವಾಗಲಿದೆ. ರಾಜ್ಯದ ಹಲವು ದೇವಾಲಯಗಳಲ್ಲಿ ಪ್ರವೇಶ ನಿರ್ಬಂಧ
ರಾಜ್ಯದ ವಿವಿಧೆಡೆ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಮೈಸೂರಿನ ಚಾಮುಂಡಿದೇವಿ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ, ಮಧ್ಯಾಹ್ನ 1 ಗಂಟೆ ಬಳಿಕ ಚಾಮುಂಡಿಬೆಟ್ಟಕ್ಕೆ ಭಕ್ತರಿಗೆ ನಿಷೇಧವಿರಲಿದೆ. ಅಲ್ಲದೆ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಕಟೀಲು ದೇವಸ್ಥಾನಗಳ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನಲ್ಲೂ ಕೆಲವು ದೇಗುಲಗಳು ಗ್ರಹಣದ ವೇಳೆ ಬಂದ್​ ಆಗಲಿವೆ. ಸೂರ್ಯಗ್ರಹಣದ ವೇಳೆ ಕಾಸ್ಮೆಟಿಕ್ ಕಿರಣಗಳಿಂದ ದೇಗುಲದಲ್ಲಿರೋ ಸೂಕ್ಷ್ಮ ಮತ್ತು ಧನಾತ್ಮಕ ಶಕ್ತಿಗೆ ಭಂಗವುಂಟಾಗುತ್ತೆ ಎಂಬ ನಂಬಿಕೆ ಇದ್ದು ಹೀಗಾಗಿ ದೇಗುಲ ಬಾಗಿಲು ಮುಚ್ಚಲಾಗುತ್ತದೆ.

ಎಲ್ಲೆಲ್ಲಿ ಗೋಚರವಾಗಲಿದೆ ಗ್ರಹಣ?

ಬೆಂಗಳೂರಲ್ಲಿ ಸಂಜೆ 5.53ಕ್ಕೆ ಗ್ರಹಣ ಶುರುವಾಗಲಿದ್ದು, 6.18ಕ್ಕೆ ಕೊನೆಗೊಳ್ಳಲಿದೆ. ಚೆನ್ನೈನಲ್ಲಿ ಸಂಜೆ 5.53ಕ್ಕೆ ಆರಂಭವಾಗಲಿದ್ದು, ಸಂಜೆ 6.18ಕ್ಕೆ ಕೊನೆಗೊಳ್ಳಲಿದೆ. ಅದೇ ರೀತಿ ಗುವಾಹಟಿಯಲ್ಲಿ ಸಂಜೆ 4.37ಕ್ಕೆ ಕಾಣಿಸಿಕೊಳ್ಳಲಿದ್ದು, ಸಂಜೆ 6.18ರವರೆಗೆ ಇರಲಿದೆ. ಕೋಲ್ಕತ್ತಾದಲ್ಲಿ ಚಂದ್ರನು ಮುಂಜಾನೆ 4:52 ಕ್ಕೆ ಪೂರ್ವ ದಿಗಂತದ ಮೇಲೆ ಏರಲು ಪ್ರಾರಂಭಿಸುತ್ತಾನೆ ಮತ್ತು 4:54 ಕ್ಕೆ ಸಂಪೂರ್ಣವಾಗಿ ಗೋಚರಿಸುತ್ತಾನೆ.

ಯಾರಿಗೆಲ್ಲ ಗ್ರಹಣ ದೋಷ?:

ಈ ಬಾರಿಯ ಚಂದ್ರ ಗ್ರಹಣ ಮೇಷರಾಶಿಯ ಭರಣಿ ನಕ್ಷತ್ರದಲ್ಲಿ ಸಂಭವಿಸಿಲಿದೆ. ಹೀಗಾಗಿ ಮೇಷ ರಾಶಿಯವರು ಸಹಜವಾಗಿಯೇ ಗ್ರಹಣದ ಎಫೆಕ್ಟ್‌ಗೆ ಒಳಪಡಲಿದ್ದಾರೆ. ಮೇಷರಾಶಿಯವರು ಮತ್ತು ಭರಣಿ ನಕ್ಷತ್ರದವರು ಗ್ರಹಣದ ನೇರ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಯಿದೆ. ಜೊತೆಗೆ ಮೇಷ ರಾಶಿಯಲ್ಲಿ ಬರುವ ಇತರೆ ಎರಡು ನಕ್ಷತ್ರಗಳಾದ ಅಶ್ವಿನಿ ಮತ್ತು ಕೃತಿಕಾ ನಕ್ಷತ್ರಗಳಿಗೂ ಇದರ ಎಫೆಕ್ಟ್‌ ಕಾಣಿಸಿಕೊಳ್ಳಬಹುದಾಗಿದೆ.
ಒಟ್ಟಾರೆ.. ಗ್ರಹಣದ ಕುರಿತ ಧಾರ್ಮಿಕ ನಂಬಿಕೆ ಮತ್ತು ಧಾರ್ಮಿಕ ಆಚರಣೆಗಳು ಒಂದೆಡೆಯಾದರೆ, ವೈಜ್ಞಾನಿಕವಾಗಿಯೂ ಇವು ನಭೋಮಂಡಲದ ವಿಸ್ಮಯಗಳಷ್ಟೆ.
ಇಂದು ಸಂಜೆ ಸಂಭವಿಸುವ ಕೌತುಕ ಕ್ಷಣಕ್ಕೆ ಬಾನಂಗಳ ಸಾಕ್ಷಿಯಾಗಲಿದೆ.

Leave a Comment

Your email address will not be published. Required fields are marked *