ಪುಣೆ: ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೊರಟಿದ್ದ ಏರ್‌ಏಷ್ಯಾ ವಿಮಾನವು ಟೇಕ್ ಆಫ್ ಆಗದೆ ಪುಣೆ ವಿಮಾನ ನಿಲ್ದಾಣದಲ್ಲೇ ಬಾಕಿಯಾಗಿರುವ ಘಟನೆ ನಡೆದಿದೆ.
ಎಲೆಕ್ಟ್ರಾನಿಕ್ ಸೆಂಟ್ರಲೈಸ್ಡ್ ಏರ್‌ಕ್ರಾಫ್ಟ್ ಮಾನಿಟರ್‌ನಿಂದ ಬ್ರೇಕ್-ಹಾಟ್ ಎಚ್ಚರಿಕೆಯ ಸಿಗ್ನಲ್ ಬಂದ ಕಾರಣ ಏರ್ ಏಷ್ಯಾ ಫ್ಲೈಟ್ I5-1427 ಪ್ರಯಾಣವನ್ನು ವಿಳಂಬಿಸಿದೆ ಎನನಲಾಗಿದೆ.
ಇನ್ನು ಬ್ರೇಕ್ ಫ್ಯಾನ್ ನಲ್ಲಿ ತಾಂತ್ರಿಕ ತೊಂದರೆ ಕಂಡು ಬಂದ ಕಾರಣ ವಿಮಾನಯಾನ ತನ್ನ ಪ್ರಯಾಣವನ್ನು ವಿಳಂಬ ಮಾಡಿದೆ, ಅಲ್ಲದೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ತಿಳಿಸಿದೆ.