ಸಮಗ್ರ ನ್ಯೂಸ್: ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ಅಭಯಾರಣ್ಯಕ್ಕೆ ಇತ್ತೀಚೆಗೆ ತರಲಾಗಿದ್ದ ಚೀತಾಗಳ ಪೈಕಿ ಆಶಾ ಎಂಬ ಚೀತಾ ಗರ್ಭ ಧರಿಸಿತ್ತು ಎಂಬ ವರದಿಗಳ ಕುರಿತು ಇದೀಗ ಸ್ವತಃ ಸಿಸಿಎಫ್ (ಚೀನಾ ಕನ್ಸ್‌ರ್ವೇಷನ್ ಫಂಡ್) ಸ್ವಯಂಸೇವಾ ಸಂಸ್ಥೆ ಸಂಸ್ಥಾಪಕಿ ಡಾ.ಲೌರಿ ಮಾರ್ಕರ್ ಸ್ಪಷ್ಟನೆ ನೀಡಿದ್ದಾರೆ.’ಗರ್ಭ ಧರಿಸಿದ್ದು ಹೌದು. ಆದರೆ ಗರ್ಭಪಾತವಾಗಿದೆ’ ಎಂದಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಡಾ. ಲೌರಿ ‘ನಮೀಬಿಯಾದ ಅರಣ್ಯದಲ್ಲಿ ಸೆರೆಹಿಡಿಯುವಾಗಲೇ ಒಂದು ಚೀತಾ ಗರ್ಭ ಧರಿಸಿತ್ತು. ಆದರೆ ನಂತರ, ಚೀತಾಗಳಲ್ಲಿ ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಾಡುವ ಒತ್ತಡಕ್ಕೆ ಒಳಗಾಗಿ ಗರ್ಭಪಾತಕ್ಕೆ ತುತ್ತಾಗಿದೆ’ ಎಂದು ಹೇಳಿದ್ದಾರೆ.
‘ಚೀತಾಗಳ ಗರ್ಭಾವಸ್ಥೆಯ ಅವಧಿ 93 ದಿನ. ಆದರೆ ಗರ್ಭಧರಿಸಿದ್ದ ಚೀತಾ ಈಗಾಗಲೇ ಭಾರತಕ್ಕೆ ಬಂದು 100 ದಿನಗಳಾಗಿವೆ. ಹೀಗಾಗಿ ಇನ್ನು ಅದು ಮರಿ ಹೆರುವ ಸಾಧ್ಯತೆ ಇಲ್ಲ. ಒಂದು ವೇಳೆ ಕ್ವಾರಂಟೈನ್ ಅವಧಿಯಲ್ಲೇ ಆಶಾ ಮರಿಯನ್ನು ಹೆತ್ತಿದ್ದರೆ, ಮರಿಗಳ ಜೊತೆ ತಾಯಿ ಹೊಂದಾಣಿಕೆಗಾಗಿ ಅವುಗಳನ್ನು ಇನ್ನಷ್ಟು ದಿನ ಮೊದಲಿಗೆ ಇಡಲಾಗಿದ್ದ ಸೀಮಿತ ಪ್ರದೇಶದಲ್ಲೇ ಇಡಬೇಕಾಗಿತ್ತು’ ಎಂದು ಡಾ.ಲೌರಿ ಹೇಳಿದ್ದಾರೆ. ಚೀತಾ ಗರ್ಭ ಧರಿಸಿದೆ ಎಂದು ಲೌರಿ ಕೆಲವು ದಿನಗಳ ಹಿಂದೆ ಹೇಳಿದ್ದರು. ಆದರೆ ಕುನೋ ಪಾರ್ಕ್ ಅಧಿಕಾರಿಗಳು ಇದು ಸುಳ್ಳು ಎಂದು ಸ್ಪಷ್ಟಪಡಿಸಿದ್ದರು.
ಚೀನಾ ಕನ್ಸ್ ರ್ವೇಷನ್ ಫಂಡ ಅಥವಾ ಚೀತಾ ಕನ್ಸ್ ರ್ವೇಷನ್ ಫಂಡ ತಿಳಿಸಿ.