ಸಮಗ್ರ ನ್ಯೂಸ್: ಸುಳ್ಯ ತಾಲೂಕು ಕಸಬಾ ಗ್ರಾಮದ ಕುದ್ಪಾಜೆ ಎಂಬಲ್ಲಿ ಸುಮಾರು ಹದಿನೈದು ದಲಿತ ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು ಈ ಬಗ್ಗೆ ಅಂಬೇಡ್ಕರ್ ರಕ್ಷಣೆ ವೇದಿಕೆಗೆ ಮನವಿ ಸಲ್ಲಿಸಲಾಯಿತು.
ಕುದ್ಪಾಜೆಯಲ್ಲಿ ಸುಮಾರು ಹದಿನೈದು ದಲಿತ ಕುಟುಂಬಗಳು ವಾಸವಾಗಿದ್ದು ಪಂಚಾಯತ್ ನಿಂದ ಕುಡಿಯುವ ನೀರಿನ ಯೋಜನೆಗೆ ತಾರಾನಾಥ ಎಂಬವರ ಗೇಟಿನ ಹತ್ತಿರ ಕೊಳವೆಬಾವಿ ತೆಗೆಯಲು ಗುರುತು ಮಾಡಿದ್ದಾರು. ಆದರೆ ಸ್ಥಳೀಯ ರಾಜಕೀಯ ವ್ಯಕ್ತಿಗಳು ತಾರಾನಾಥ ಎಂಬವರ ಗೇಟಿನ ಹತ್ತಿರ ಕೊಳವೆಬಾವಿ ತೆಗೆಯಬಾರದು ಎಂದು ಹೇಳುತ್ತಿದ್ದಾರೆ.
ತಾರಾನಾಥ ಎಂಬವರ ಗೇಟಿನ ಹತ್ತಿರ ಕೊಲವೆಬಾವಿ ತೆರೆದರೆ 15 ದಲಿತ ಕುಟುಂಬದವರಿಗೆ ಸೇರಿ ಎಲ್ಲ ಮನೆಗೂ ನೀರು ಸಪ್ಲೈ ಆಗಬಹುದು, ಇಲ್ಲದಿದ್ದರೆ ಬೇರೆ ಕಡೆ ಕೊಳವೆ ಬಾವಿ ತೆಗೆದರೆ ಮೇಲೆ ಇರುವಂತಹ ದಲಿತರ ಮನೆಗೆ ನೀರು ಬರೋದಿಲ್ಲ ಎಂದು ಕುದ್ಪಾಜೆಯ ದಲಿತ ನಿವಾಸಿಗಳು ಅಂಬೇಡ್ಕರ್ ರಕ್ಷಣೆ ವೇದಿಕೆಗೆ ತಿಳಿಸಿದರು.
ಮಾಹಿತಿ ತಿಳಿದ ತಕ್ಷಣ ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷರಾದ ಪಿ.ಸುಂದರ ಪಾಟಾಜೆ ನ
4 ರಂದು ಸುಳ್ಯ ನಗರ ಪಂಚಾಯತ್ ಮುಖ್ಯ ಅಧಿಕಾರಿಗಳ ಜೊತೆ ಮಾತನಾಡಿ ಕುದ್ಪಾಜೆ ತಾರಾನಾಥ ಗೌಡರ ಎಂಬವರ ಗೇಟಿನ ಹತ್ತಿರ ಕೊಳವೆಬಾವಿ ತೆಗೆದರೆ 15 ದಲಿತರ ಮನೆಗೆ ನೀರು ಸಿಗಲು ಸಾಧ್ಯ.
ಆದರೆ ಬೇರೆ ಕಡೆ ತೆಗೆದರೆ ಗುಡ್ಡದ ಮೇಲಿರುವಂತ ದಲಿತರಿಗೆ ನೀರು ಸಿಗಲು ಸಾಧ್ಯವಿಲ್ಲ ಮತ್ತು ಜನರು ರಾಜಕೀಯ ಮಾಡಿ ದಲಿತರಿಗೆ ಕುಡಿಯಲು ನೀರು ಇಲ್ಲದಂತೆ ಮಾಡಬೇಡಿ ಆದಕಾರಣ ತಾರಾನಾಥ ಎಂಬವರ ಗೇಟಿನ ಹತ್ತಿರ ಕೊಳವೆಬಾವಿ ತೆಗೆಯಬೇಕು ಎಂದು ಹೇಳಿದ್ದಾರೆ. ಈ ವೇಳೆ ನಗರ ಪಂಚಾಯತ್ ಮುಖ್ಯ ಅಧಿಕಾರಿ “ಮೊದಲಿಗೆ ನಾನು ಬಂದು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಉಬರಡ್ಕ ಮಿತ್ತೂರು ಗ್ರಾಮ ಘಟಕ ಅಧ್ಯಕ್ಷ ರಮೇಶ ಕೊಡಂಕಿರಿ, ಸುಂದರ ಕುದ್ಪಾಜೆ ಸಂಜೀವ ಕುದ್ಪಾಜೆ ನಿತಿನ್ ಕೊಯಿಂಗಜೆ ಉಪಸ್ಥಿತರಿದ್ದರು.