ಸಮಗ್ರ ನ್ಯೂಸ್: ಮನುಷ್ಯನ ಜೀವನ ಅಂದಮೇಲೆ ಕಷ್ಟ ಸುಖಗಳು ಇದ್ದೇ ಇರುತ್ತದೆ. ಕೆಲ ಸಮಯ ಕಷ್ಟವಿದ್ದರೆ, ಮತ್ತೆ ಕೆಲ ಸಮಯ ಸುಖವಿರುತ್ತದೆ. ಜ್ಯೋತಿಷ್ಯದ ಪ್ರಕಾರ, ನಮಗೆ ಶುಭವಾಗುವ ಮೊದಲು ಅಥವಾ ಅಶುಭವಾಗುವ ಮೊದಲು ದೇವರು ಹಲವಾರು ಸೂಚನೆಗಳನ್ನ ಕೊಡ್ತಾನೆ ಎಂದು ಹೇಳಲಾಗಿದೆ.
ಅದೇ ರೀತಿ ಕಾಗೆಗಳು ಕೂಡ ನಿಮ್ಮ ಲಕ್ ಬದಲಾಗುವ ಸಂದರ್ಭದಲ್ಲಿ ಕೆಲ ಸೂಚನೆಗಳನ್ನು ನೀಡುತ್ತದೆ. ಹಾಗಾದ್ರೆ ಕಾಕಶಾಸ್ತ್ರ ಏನು ಹೇಳುತ್ತೆ ಎಂಬುದನ್ನು ತಿಳಿಯೋಣ ಬನ್ನಿ..
ಕಾಗೆಯೆಂದರೆ ಹೊಲಸನ್ನು ತಿಂದು ಬದುಕುವ ಪಕ್ಷಿ ಎಂದೇ ಹೇಳ್ತಾರೆ. ಕಪ್ಪು ಕಾಗೆಯನ್ನು ಯಾರೂ ಅಪ್ಪಿಕೊಳ್ಳುವವರಿಲ್ಲ. ಆದರೆ ಕಾಗೆಯಿಂದಲೂ ಹಲವು ಲಾಭವಿದೆ ಎಂದು ಶಾಸ್ತ್ರಗಳು ಹೇಳುತ್ತವೆ.
ನೀವು ಪ್ರವಾಸಕ್ಕೆ ಹೋಗುವ ಮುನ್ನ, ಅಥವಾ ಸಂದರ್ಶನಕ್ಕೆ ಹೋಗುವ ಮುನ್ನ, ಎಲ್ಲಾದರೂ ಹೊರಗಡೆ ಹೋಗುವ ಮುನ್ನ ನಿಮ್ಮೆದುರು ಕಾಗೆ ಬಂದು ಕೂಗಿದರೆ, ನಿಮಗೆ ಶುಭವಾಗಲಿದೆ ಎಂದರ್ಥ. ಕಾಗೆ ಕೂಗುತ್ತ ನಿಮ್ಮ ಪಶ್ಚಿಮ ದಿಕ್ಕಿಗೆ ಹೋದರೆ, ನಿಮ್ಮ ಕೆಲಸ ಸಫಲವಾಗಲಿದೆ ಎಂದರ್ಥ.
ನೀವು ಹೊರಗೆ ಹೋಗುವಾಗ ಕಾಗೆ ತನ್ನ ಕೊಕ್ಕಿನಿಂದ ನೆಲವನ್ನು ಕುಕ್ಕುವಂತೆ ಕಂಡರೆ, ನಿಮಗೆ ಲಕ್ಷ್ಮೀ ದೇವಿಯ ಕೃಪೆ ಉಂಟಾಗಲಿದೆ ಎಂದರ್ಥ. ಇನ್ನು ಬಾಯಲ್ಲಿ ಹಣ್ಣು, ಧಾನ್ಯ, ಮಣ್ಣು ತೆಗೆದುಕೊಂಡು ನಿಮ್ಮ ಮನೆಯಂಗಳದಲ್ಲಿ ಹಾಕಿದರೆ ನಿಮಗೆ ಅಚಾನಕ್ ಆಗಿ ಧನ ಪ್ರಾಪ್ತಿಯಾಗಲಿದೆ ಎಂದರ್ಥ.
ನೀವು ಹಾಕಿದ ಆಹಾರವನ್ನು ಕಾಗೆ ಬಂದು ಸೇವಿಸಿದರೆ, ನಿಮ್ಮ ಭಾಗ್ಯದ ಬಾಗಿಲು ತೆಗೆಯಲಿದೆ ಎಂದರ್ಥ. ಇನ್ನು ಶ್ರಾದ್ಧದ ಸಮಯದಲ್ಲಿ ನೀವು ಹಾಕಿದ ನೈವೇದ್ಯವನ್ನು ಕಾಗೆ ಬಂದು ಸೇವಿಸಿದರೆ, ನಿಮ್ಮ ಪೂರ್ವಜರು ನಿಮಗೆ ಪೂರ್ತಿ ಆಶೀರ್ವಾದ ಕೊಟ್ಟಿದ್ದಾರೆಂದು ಅರ್ಥ.
ಕಾಗೆ ಮನೆ ಮೇಲೆ ನಿಂತು ಕೂಗಿದರೆ, ಕೆಲವರು ಮನೆಗೆ ಅತಿಥಿಗಳು ಬರುತ್ತಾರೆಂದು ಹೇಳುತ್ತಾರೆ. ಇನ್ನು ಕೆಲವರು ಸಾವಿನ ಸುದ್ದಿ ಬರುತ್ತದೆ ಎಂದು ಹೇಳುತ್ತಾರೆ. ಇದು ಹಲವು ಬಾರಿ ನಡೆದ ಘಟನೆಗೂ ಸಾಕ್ಷಿಯಾಗಿದೆ.
ಒಟ್ಟಾರೆ ಕಪ್ಪಾಗಿರುವ ಕಾಗೆ ಒಳ್ಳೆದನ್ನು ತರುತ್ತೆ ಎಂದರೆ ನಂಬಲೇಬೇಕು. ಹಾಗಾಗಿ ಕಾಗೆಯನ್ನು ವ್ರಥಾ ಹೀಗೆಳೆಯೋದು ತಪ್ಪಾಗುತ್ತದೆ