ಸಮಗ್ರ ನ್ಯೂಸ್: ದಕ್ಷಿಣಕೊರಿಯಾದ ರಾಜಧಾನಿ ಸಿಯೋಲ್‍ನಲ್ಲಿ ಹ್ಯಾಲೋವೀನ್ ಹಬ್ಬದ ಸಮಯದಲ್ಲಿ ನೂಕು ನುಗ್ಗಲು ಉಂಟಾಗಿದ್ದು, ಕನಿಷ್ಠ 50 ಜನರು ಹೃದಯ ಸ್ತಂಭನಕ್ಕೊಳಗಾಗಿದ್ದಾರೆ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
ಇಟಾವೊನ್ವಿರಾಮ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಜನಸಂದಣಿ ಹೆಚ್ಚಾದಾಗ ಸುಮಾರು 100 ಜನರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಅಗ್ನಿಶಾಮಕ ಏಜೆನ್ಸಿಯ ಅಧಿಕಾರಿ ಚೋಯ್ಚೆಯೊನ್-ಸಿಕ್ ತಿಳಿಸಿದ್ದಾರೆ.
ಹೃದಯ ಸ್ತಂಭನಕ್ಕೆ
ಚಿಕಿತ್ಸೆ ಪಡೆಯುತ್ತಿರುವ ನಿರ್ದಿಷ್ಟ ಸಂಖ್ಯೆಯ ಜನರ ಬಗ್ಗೆ ಅವರು ಮಾಹಿತಿ ನೀಡಲಿಲ್ಲ. ಆದರೆ,ಅವರು ಡಜನ್ ಗಟ್ಟಲೆ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದರು.
ಇಟಾವೊನ್ ನ ಬೀದಿಗಳಲ್ಲಿ ಡಜನ್‍ಗಟ್ಟಲೆ ಹಲವು ಜನರಿಗೆ ಸಿಪಿಆರ್ ನೀಡಲಾಗುತ್ತಿದೆ ಮತ್ತು ಇನ್ನೂ ಅನೇಕರನ್ನು ಹತ್ತಿರದ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗುತ್ತಿದೆ.
ಈ ಕುರಿತು ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ಸುಕ್ಯೋಲ್ ಅವರು ಹೇಳಿಕೆ ಬಿಡುಗಡೆ ಮಾಡಿದ್ದು ಗಾಯಗೊಂಡವರಿಗೆ ತ್ವರಿತ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಉತ್ಸವ ಸ್ಥಳಗಳ ಸುರಕ್ಷತೆಯನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.