Ad Widget .

ಇಂದಿನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೋಲ್ವೋ ಬಸ್ ಸಂಚಾರ

ಸಮಗ್ರ ನ್ಯೂಸ್: ಮಂಗಳೂರು ನಗರದ ಬಿಜೈ ಸರಕಾರಿ ಬಸ್ ನಿಲ್ದಾಣ ಮತ್ತು ಮಣಿಪಾಲದಿಂದ ಬಜ್ಪೆ ಕೆಂಜಾರಿನಲ್ಲಿರುವ ‘ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ಕ್ಕೆ ಅ.27ರಿಂದ ಸರಕಾರಿ ವೋಲ್ವೊ ಬಸ್ ಸಂಚಾರ ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಹಲವು ವರ್ಷಗಳಿಂದಲೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಸರಕಾರಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆಯು ಇತ್ತು. ಅದರಂತೆ ಸಂಚಾರ ಆರಂಭಿಸಿದ್ದರೂ ಕೂಡ ಆದಾಯದ ಕೊರತೆಯ ನೆಪದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಬೇಡಿಕೆ ಮತ್ತಷ್ಟು ತೀವ್ರಗೊಂಡ ಹಿನ್ನಲೆಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಬಸ್ ಸಂಚಾರ ಅರಂಭಿಸಲು ಸೂಚನೆ ನೀಡಿದ್ದರು. ಅದರಂತೆ ಮೈಸೂರು ವಿಭಾಗದಿಂದ ನಾಲ್ಕು ವೋಲ್ವೊ ಬಸ್‌ಗಳನ್ನು ತರಿಸಲಾಗಿತ್ತು. ಆದರೆ ಆರ್‌ಟಿಒ ಪರವಾನಗಿ ನೀಡದ ಕಾರಣ ಓಡಾಟ ಸಾಧ್ಯವಾಗಿರಲಿಲ್ಲ.

Ad Widget . Ad Widget . Ad Widget .

ಈ ನಿಟ್ಟಿನಲ್ಲಿ ಆರ್‌ಟಿಒ, ಕೆಎಸ್ಸಾರ್ಟಿಸಿ, ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ನಡೆಸಿದ ಮಾತುಕತೆಯು ಪಲಫ್ರದವಾಗಿದ್ದು, ಅ.27ರಂದು ಸಂಚಾರ ಆರಂಭಗೊಳ್ಳುವ ಸಾಧ್ಯತೆ ಇದೆ.

ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಸ್ಟೇಟ್‌ಬ್ಯಾಂಕ್-ಸೆಂಟ್ರಲ್ ರೈಲು ನಿಲ್ದಾಣ-ಲಾಲ್‌ಬಾಗ್- ಕುಂಟಿಕಾನ- ಕಾವೂರು ಮೂಲಕ ಕೆಂಜಾರಿಗೆ ಬೆಳಗ್ಗೆ 6:30ರಿಂದ ಬಸ್ ಸಂಚರಿಸಲಿದೆ. ಈ ರೂಟ್‌ನ ಪ್ರಯಾಣ ದರ 100 ರೂ. ನಿಗದಿಪಡಿಸಲಾಗಿದೆ. ಮಣಿಪಾಲದಿಂದ ಆಗಮಿಸುವ ಬಸ್ ಕಾವೂರು ಮೂಲಕ ವಿಮಾನ ನಿಲ್ದಾಣ ತಲುಪಲಿದೆ. ಈ ರೂಟ್‌ನ ಪ್ರಯಾಣ ದರ 300 ರೂ.ನಿಗದಿಪಡಿಸಲಾಗಿದೆ.

Leave a Comment

Your email address will not be published. Required fields are marked *