Ad Widget .

ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆ| ಅ.28ರಂದು ಅಧಿಕಾರ ಸ್ವೀಕಾರ

ಸಮಗ್ರ ನ್ಯೂಸ್: ಭಾರತ ಮೂಲದ, ಇನ್ಫೋಸಿಸ್‌ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್‌ (Rishi Sunak) ಅವರು ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾದ ಮೊದಲ ಅನಿವಾಸಿ ಭಾರತೀಯ ಎನಿಸಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರಿಷಿ ಸುನಕ್‌ ಅವರಿಗೆ 196 ಸಂಸದರ ಬೆಂಬಲ ಸಿಕ್ಕಿದ್ದು, ಪೆನ್ನಿ ಮೋರ್ಡಾಂಟ್‌ ಅವರಿಗೆ ಕೇವಲ 27 ಸಂಸದರು ಬೆಂಬಲ ನೀಡಿದ್ದರು. ಹಾಗಾಗಿ, ರಿಷಿ ಅವರನ್ನು ನೂತನ ಪ್ರಧಾನಿಯನ್ನಾಗಿ ಘೋಷಣೆ ಮಾಡಲಾಗಿದ್ದು, ಅಕ್ಟೋಬರ್‌ 28ರಂದು ಪದಗ್ರಹಣ ಮಾಡಲಿದ್ದಾರೆ.

Ad Widget . Ad Widget . Ad Widget .

ಲಿಜ್‌ ಟ್ರಸ್‌ ಅವರು ರಾಜೀನಾಮೆ ನೀಡಿದ ಬಳಿಕ ನೂತನ ಪ್ರಧಾನಿ ಆಯ್ಕೆಯ ಕಣದಲ್ಲಿ ಕನ್ಸರ್ವೇಟಿವ್‌ ಪಕ್ಷದ ರಿಷಿ ಸುನಕ್‌, ಬೋರಿಸ್‌ ಜಾನ್ಸನ್‌ ಹಾಗೂ ಪೆನ್ನಿ ಮೋರ್ಡಾಂಟ್‌ ಆಕಾಂಕ್ಷಿಗಳಾಗಿದ್ದರು. ಆದರೆ, ಬೋರಿಸ್‌ ಜಾನ್ಸನ್‌ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಹಾಗೂ ಸೋಮವಾರ ಸಂಜೆಯೊಳಗೆ ಸಂಸದೆ ಪೆನ್ನಿ ಮೋರ್ಡಾಂಟ್‌ ಅವರು 100 ಸಂಸದರ ಬೆಂಬಲ ಪಡೆಯದ ಹಿನ್ನೆಲೆಯಲ್ಲಿ ರಿಷಿ ಸುನಕ್‌ ಅವರೇ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಬೋರಿಸ್‌ ಜಾನ್ಸನ್‌ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಕಾರಣ ಕೆಲ ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ರಿಷಿ ಸುನಕ್‌ ಸೋಲನುಭವಿಸಿದ್ದರು. ಲಿಜ್‌ ಟ್ರಸ್‌ ಅವರು 81,326 ಮತ ಗಳಿಸಿದರೆ, ರಿಷಿ ಸುನಾಕ್‌ ಅವರಿಗೆ 60,399 ಮತ ಲಭಿಸಿದ್ದವು. ಲಿಜ್‌ ಟ್ರಸ್‌ ವಿರುದ್ಧ ಸುನಕ್‌ ಅವರು 20,927 ಸೋಲನುಭವಿಸಿದ್ದರು. ಆದರೆ ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸುನಕ್‌ ಅವರು ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ‌

ರಿಷಿ ಸುನಕ್‌ ಅವರ ತಂದೆ ಯಶವೀರ್‌ ಹಾಗೂ ತಾಯಿ ಉಷಾ ಸುನಕ್ ಭಾರತ ಮೂಲದವರಾಗಿದ್ದು, ಇವರು 1960ರಲ್ಲಿ ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ. ರಿಷಿ ಸುನಕ್‌ ಅವರು 1980ರಲ್ಲಿ ಜನಿಸಿದ್ದು, ರಾಜಕೀಯ ಪ್ರವೇಶಿಸುವ ಮುನ್ನ ಉದ್ಯಮಿ ಹಾಗೂ ಹೂಡಿಕೆಯಲ್ಲಿ ತೊಡಗಿದ್ದರು. ಯಾರ್ಕ್‌ಶೈರ್‌ ಕ್ಷೇತ್ರದಿಂದ 2015ರಲ್ಲಿ ಸಂಸದರಾಗಿ ಆಯ್ಕೆಯಾದ ಸುನಕ್‌, ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದಿದ್ದರು.

ಇದಾದ ಬಳಿಕ ಬೋರಿಸ್‌ ಜಾನ್ಸನ್‌ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು. ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ಮದುವೆಯಾಗಿರುವ ರಿಷಿ ಸುನಕ್‌ ಅವರಿಗೆ ಕೃಷ್ಣಾ ಹಾಗೂ ಅನೌಷ್ಕಾ ಎಂಬ ಪುತ್ರಿಯರಿದ್ದಾರೆ. ಇವರ ಆಸ್ತಿಯ ಒಟ್ಟು ಮೌಲ್ಯ 700 ದಶಲಕ್ಷ ಪೌಂಡ್‌ (ಸುಮಾರು 65 ಸಾವಿರ ಕೋಟಿ ರೂ.) ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *