ಸಮಗ್ರ ನ್ಯೂಸ್: ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಾರ್ವಜನಿಕ ಸಹಭಾಗಿತ್ವ ಯೋಜನೆಯಡಿ ಜನಸಾಮಾನ್ಯರ ಮನೆ ಬಾಗಿಲಿಗೆ ತಾಜಾ ಮೀನು ತಲುಪಿಸುವ ಯೋಜನೆಯನ್ನು ಮೀನುಗಾರಿಕಾ ಇಲಾಖೆ ಹಮ್ಮಿಕೊಂಡಿದೆ. ಸೀಗರ್ ಸೀಫುಡ್ ಲಾಜಿಸ್ಟಿಕ್ಸ್ ಸಂಸ್ಥೆಯು (Sheegr Seafood and Logistics Pvt.ltd ) ಈ ಯೋಜನೆಯ ಉಸ್ತುವಾರಿ ಹೊತ್ತುಕೊಂಡಿದೆ.
ತಾಜಾ ಮೀನಿನ ಜೊತೆಗೆ ಮೀನಿನ ಉತ್ಪನ್ನಗಳನ್ನೂ ಶೀಘ್ರವಾಗಿ ಮನೆ ಬಾಗಿಲಿಗಿಗೆ ತಲುಪಿಸುವ ಯೋಜನೆ ಹಮ್ಮಿಕೊಂಡಿದೆ. ಮಂಗಳೂರು ಮತ್ತು ಮಲ್ಪೆ ಮೀನುಗಾರಿಕಾ ಬಂದರುಗಳಿಂದ ತಾಜಾ ಮೀನನ್ನು ವಿಮಾನದ ಮೂಲಕ ಬೆಂಗಳೂರಿಗೆ ತಲುಪಿಸಿ, ೨೪೩ ಚಿಲ್ಲರೆ ಮಳಿಗೆಗಳ ಮೂಲಕ ಮತ್ತು ಶೀಘ್ರ ಆಪ್ ಮೂಲಕ ಜನರ ಮನೆ ಬಾಗಿಲಿಗೆ ಮೀನು ಮತ್ತು ಮೀನಿನ ಉತ್ಪನ್ನಗಳನ್ನು ತಲುಪಿಸುವ ಯೋಜನೆ ಇದಾಗಿದೆ.
ಈ ಯೋಜನೆ ಜನವರಿಯಿಂದ ಕರ್ನಾಟಕದಾದ್ಯಂತ ಆರಂಭವಾಗಲಿದ್ದು, ಇದನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಮೀನುಗಾರಿಕೆ ಇಲಾಖೆ ಹಾಗೂ ಫ್ರೀಡಂ ಆಪ್ ಸಹಯೋಗದೊಂದಿಗೆ ಸಚಿವ ಎಸ್ ಅಂಗಾರ ಅವರ ಮುತುವರ್ಜಿಯೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಒಳನಾಡು ಮೀನು ಉತ್ಪಾದಕರ ಸಮಾವೇಶ ನಡಯಿತು. ಸಮಾವೇಶವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು.
ಸಮಾವೇಶದಲ್ಲಿ ಪಂಟಿಯಸ್ ಕರ್ನಾಟಿಕಸ್, ಕೋಯಿ ಕಾರ್ಪ್, ಫಿದ ಬ್ಯಾಕ್ಸ್, ಮಹಶೀರ್, ಗಿಫ್ಟ್ ತಿಲಾಪಿಯಾ, ಡೆನಿಸೋನಿ ಬಾರ್ಬ್, ಡಾಕ್ಟರ್ ಗರಾ, ಗ್ರೆನ್ ತೇರಿ, ಸಿಂಘಿ, ಸ್ನೇಕ್ ಹೆಡ್ ಹೀಗೆ ವಿಭಿನ್ನ ಮೀನುತಳಿಗಳ ಪರಿಚಯ ಮಾಡಿಸಲಾಯಿತು.