ಮಹಾರಾಷ್ಟ್ರ: ಚಲಿಸುತ್ತಿರುವ ವಾಹನಗಳು ತಾಂತ್ರಿಕ ವೈಫಲ್ಯಕ್ಕೀಡಾದಾಗ ಚಾಲಕರು ಸಮಯಪ್ರಜ್ಞೆ ಮೆರೆದು ದೊಡ್ಡ ದೊಡ್ಡ ಅನಾಹುತಗಳನ್ನು ತಪ್ಪಿಸಿದ ಹಲವಾರು ಉದಾಹರಣೆಗಳಿವೆ. ಅಂತೆಯೇ ಇಲ್ಲೊಬ್ಬ ಲಾರಿ ಚಾಲಕ, ಬ್ರೇಕ್ ವೈಫಲ್ಯ ಗೊಂಡ ಕಾರಣ ಲಾರಿಯನ್ನು ಹೆದ್ದಾರಿಯಲ್ಲಿ ರಿವರ್ಸ್ ಚಲಾಯಿಸಿ, ಅಪಾಯವನ್ನು ತಪ್ಪಿಸುವಲ್ಲಿ ತನ್ನ ಚಾಲಾಕಿತನ ತೋರಿಸಿದ್ದಾನೆ.
ಮಹಾರಾಷ್ಟ್ರದ ಜಲ್ನಾ-ಸಿಲ್ಲೋಡ್ ರಸ್ತೆಯಲ್ಲಿ ಲಾರಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಬ್ರೇಕ್ ವೈಫಲ್ಯಗೊಂಡರಿವುದನ್ನು ಚಾಲಕ ಅರಿತಿದ್ದಾನೆ. ಆತ ತಡ ಮಾಡದೆ ಮಂದೆ ಚಲಿಸಿದರೆ ಹೆಚ್ಚಿನ ಅಪಾಯ ಸಂಭವಿಸಬಹುದು ಎಂದು ರಿವರ್ಸ್ ಗೇರ್ ನಲ್ಲಿ ಸುಮಾರು ಮೂರು ಕಿ.ಮೀ. ದೂರ ಪೂರ್ಣ ಪ್ರಮಾಣದಲ್ಲಿ ಸರಕು ತುಂಬಿದ್ದ ಬೃಹತ್ ಲಾರಿ ಚಲಾಯಿಸಿ, ಕೊನೆಗೆ ಹೊಲವೊಂದಕ್ಕೆ ವಾಹನ ನುಗ್ಗಿಸುವಲ್ಲಿ ಸಫಲನಾಗಿದ್ದಾನೆ. ಚಾಲಕನ ಸಮಯ ಪ್ರಜ್ಞೆಯಿಂದ ವಾಹನ ದಟ್ಟಣೆ ಇರುವ ಹೆದ್ದಾರಿಯಲ್ಲಿ ನಡೆಯಬಹುದಾಗಿದ್ದ ದುರ್ಘಟನೆ ತಪ್ಪಿದಂತಾಗಿದೆ.
ಚಾಲಕನಿಗೆ ವಾಹನ ರಿವರ್ಸ್ ಓಡಿಸಲು ಕೆಲವು ಬೈಕ್ ಸವಾರರು ಸಹಕರಿಸಿದ್ದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇಲ್ಲಿದೆ ವೈರಲ್ ವಿಡಿಯೋ: