ಸಮಗ್ರ ನ್ಯೂಸ್: ಕ್ಷೇತ್ರದ ಜನರೊಂದಿಗೆ ಇರುವ ಸಂಪರ್ಕ, ಪಕ್ಷದ ನಿಷ್ಠೆ, ಪಾದಯಾತ್ರೆಯಲ್ಲಿ ಅವರು ಕೈಗೊಂಡ ಸೇವೆ ಸೇರಿದಂತೆ ಎಲ್ಲವನ್ನೂ ಪರಿಗಣಿಸಿ ಟಿಕೇಟ್ ನೀಡಲಾಗುವುದು, ಈ ಬಾರಿ ಹೊಸ ಮುಖಗಳಿಗೂ ಟಿಕೇಟ್ ನಿಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬಳ್ಳಾರಿಯ ಮೋಕಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರ್ವೆ ಮಾಡಿದ ವರದಿಗಳು ಕೈ ಸೇರಿದ್ದು, 150 ಜನರಿಗೆ ಟಿಕೇಟ್ ಮೊದಲೇ ಘೋಷಣೆ ಮಾಡುವ ಹಂತ ಪೂರ್ಣಗೊಂಡಿದೆ. ಯುವ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಅಭೂತಪೂರ್ವ ಬೆಂಬಲ, ಪ್ರೋತ್ಸಾಹ ವ್ಯಕ್ತವಾಗಿದೆ. ಇದನ್ನು ಕಂಡು ಬಿಜೆಪಿ ಅವರಿಗೆ ನಡುಕ ಶುರುವಾಗಿದೆ, ಈ ಹಿನ್ನೆಲೆಯಲ್ಲಿ ನಮ್ಮ ಬಗ್ಗೆ ಮನಬಂದಂತೆ ಮಾತಾಡುತ್ತಿದ್ದಾರೆ, ಬರುವ ಚುನಾವಣೆಯಲ್ಲಿ ನಾವಲ್ಲ ರಾಜ್ಯದ ಪ್ರಭುದ್ದ ಜನರೇ ಬಿಜೆಪಿ ಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.