ಸಮಗ್ರ ನ್ಯೂಸ್: ರಾಷ್ಟ್ರಾಧ್ಯಂತ ಭಾರೀ ಸುದ್ದಿ ಮಾಡಿದ್ದ ಹಿಜಾಬ್ ವಿವಾದವನ್ನು ವಿಸ್ತ್ರತ ಸಿಜೆಐ ಪೀಠಕ್ಕೆ ವರ್ಗಾಯಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
10 ದಿನಗಳ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠವು ಸೆಪ್ಟೆಂಬರ್ 22ರಂದು ತೀರ್ಪನ್ನು ಕಾಯ್ದಿರಿಸಿತ್ತು.
ಫೆಬ್ರವರಿಯಲ್ಲಿ ಹಿಜಾಬ್ ನಿರ್ಬಂಧಿಸಿ ಆದೇಶ ಹೊರಡಿಸಿದ್ದ ಸರ್ಕಾರದ ನಿಷೇಧ ಎತ್ತಿ ಹಿಡಿದಿದ್ದ ಹೈಕೋರ್ಟ್, ಹಿಜಾಬ್ ಅತ್ಯಗತ್ಯ ಧಾರ್ಮಿಕ ಅಭ್ಯಾಸ ಅಲ್ಲ ಎನ್ನುವುದು ಸರಿಯಲ್ಲ, ಹೈಕೋರ್ಟ್ ತಪ್ಪಾಗಿ ತೀರ್ಪು ನೀಡಿದೆ ಎನ್ನುವುದು ಅರ್ಜಿದಾರರ ವಾದವಾಗಿದೆ.
ಸದ್ಯ ಸುಪ್ರೀಂ ಕೋರ್ಟ್ ವಿಭಿನ್ನ ತೀರ್ಪು ನೀಡಿದ್ದು, ಸದ್ಯ ಹೈಕೋರ್ಟ್ ನೀಡಿರುವ ಆದೇಶ ಜಾರಿಯಲ್ಲಿರಲಿದೆ.