Ad Widget .

ಹಣದ ಕೊರತೆ ನೀಗಿಸಲು ನರಬಲಿ| ಇಬ್ಬರು ಮಹಿಳೆಯರ ಕೊಂದು ಭಕ್ಷಿಸಿದ ರಾಕ್ಷಸರು|

ಸಮಗ್ರ ನ್ಯೂಸ್: ದೇವರ ನಾಡು ಕೇರಳದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದಂಪತಿಗಳು ಮೂಢನಂಬಿಕೆಗೆ ಒಳಗಾಗಿ ಇದನ್ನು ಪರಿಹರಿಸಿಕೊಳ್ಳಲು ನರಬಲಿ ನೀಡಿದ್ದಾರೆ. ಇವರ ಘೋರ ಕೃತ್ಯಕ್ಕೆ ಇಬ್ಬರು ಮಹಿಳೆಯರು ಬಲಿಯಾಗಿದ್ದು, ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕೇರಳದಲ್ಲಿ ಈ ಘಟನೆ ನಡೆದಿದ್ದು, ಭಾಗವಾರ್ ಸಿಂಗ್ ಮತ್ತು ಲೈಲಾ ಎಂಬ ದಂಪತಿ ತಮ್ಮ ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳುವ ಸಲುವಾಗಿ ಮಂತ್ರವಾದಿಯ ಮೊರೆ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಆತ ನರಬಲಿ ಕೊಟ್ಟರೆ ಸಮಸ್ಯೆ ಪರಿಹಾರವಾಗುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ದಂಪತಿ ಈ ಕೃತ್ಯ ಎಸಗಿದ್ದಾರೆ.

Ad Widget . Ad Widget . Ad Widget .

ಮೊದಲಿಗೆ ರೋಸಲಿನ್ ಎಂಬ 50 ವರ್ಷದ ಮಹಿಳೆಯನ್ನು ಅಪಹರಿಸಿದ್ದ ಈ ದಂಪತಿ, ಜೂನ್ ನಲ್ಲಿ ಆಕೆಯನ್ನು ಬಲಿ ಕೊಟ್ಟಿದ್ದರು. ಬಳಿಕ 52 ವರ್ಷದ ಪದ್ಮಾ ಎಂಬಾಕೆಯನ್ನು ಅಪಹರಿಸಿದ್ದು ಸೆಪ್ಟಂಬರ್ ನಲ್ಲಿ ಬಲಿ ಕೊಟ್ಟಿದ್ದರು. ಇವರುಗಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ವಿವಿಧ ಭಾಗಗಳಲ್ಲಿ ಹೂತು ಹಾಕಿದ್ದರು ಎನ್ನಲಾಗಿದೆ.

ಮಹಿಳೆಯರ ನಾಪತ್ತೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತಮಗೆ ಸಿಕ್ಕ ಮೊಬೈಲ್ ಸುಳಿವು ಆಧರಿಸಿ ಶಫಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇದೀಗ ದಂಪತಿಯನ್ನೂ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಪದ್ಮಾ ಹಾಗೂ ರೋಸಲಿನ್ ಅವರ ಹತ್ಯೆ ಎಷ್ಟೊಂದು ಭೀಕರವಾಗಿತ್ತು ಎನ್ನುವುದನ್ನು ಕಂಡು ಕೇರಳ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಮೂವರು ಹಂತಕ ಆರೋಪಿಗಳು ರೋಸಲಿನ್‌ನ್ನು ಕತ್ತು ಸೀಳಿ ಕೊಲೆ ಮಾಡಿ ರುಂಡ ಬೇರ್ಪಡಿಸಿ ದೇಹದ ಅಂಗಗಳನ್ನು 56 ತುಂಡುಗಳನ್ನಾಗಿ ಮಾಡಿ ಬೇರೆ ಬೇರೆ ಕಡೆ ಹೂಳಿದ್ದರು. ಪದ್ಮಾಳನ್ನು ಕತ್ತು ಹಿಸುಕಿ ಕೊಲೆ ಮಾಡಿ ಅವಳ ಸ್ತನಗಳನ್ನು ಕತ್ತರಿಸಿ ಬಕೆಟಿನಲ್ಲಿ ರಕ್ತವನ್ನು ತುಂಬಿಸಿಟ್ಟಿದ್ದರು. ಬಳಿಕ ದೇಹವನ್ನು ತುಂಡು ತುಂಡು ಮಾಡಿ ಹೂಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೆ ಬಳಸಿದ್ದ ಅಸ್ತ್ರಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಆಘಾತಕಾರಿ ಅಂಶ ತಿಳಿಸಿದ್ದಾರೆ. ಕೃತ್ಯದ ಆಯಾಮಗಳನ್ನು ನೋಡಿದರೆ ನರಭಕ್ಷಣೆ ಆದಂತಿದೆ ಎಂದು ಕೊಚ್ಚಿ ಪೊಲೀಸ್ ಕಮಿಷನರ್ ಸಿ.ಎಚ್. ನಾಗರಾಜು ಅವರು ಮಾಧ್ಯಮಗಳಿಗೆ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಘಟನೆಯ ಬಗ್ಗೆ ಇನ್ನೂ ವಿವರವಾದ ತನಿಖೆ ನಡೆಯಬೇಕಿದೆ. ಸದ್ಯಕ್ಕೆ ಆರೋಪಿಗಳನ್ನು ಬಂಧಿಸಲಾಗಿದ್ದು, ವಾಮಾಚಾರಕ್ಕಾಗಿ ಇದೇ ರೀತಿ ಇವರು ಇನ್ನಷ್ಟು ಮಹಿಳೆಯರನ್ನು ಬಲಿ ಕೊಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

Leave a Comment

Your email address will not be published. Required fields are marked *