ಸಮಗ್ರ ನ್ಯೂಸ್: ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ಪೊಲೀಸ್ ಕಮೀಷನರೇಟ್ ನ್ಯಾಯಾಲಯಕ್ಕೆ 840 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಜೆಎಂಎಫ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾಜ್‌ಶೀಟ್‌ನಲ್ಲಿ ಕೊಲೆಗೆ ಏನು ಕಾರಣ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖವಾಗಿದೆ. ಸರ್ವೆ ನಂಬರ್ 166/1 ,5.11 ಗುಂಟೆ ಜಮೀನು ವಿಚಾರ ಗುರೂಜಿ ಕೊಲೆಗೆ ಮುಖ್ಯ ಕಾರಣ ಎಂದು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಚಾರ್ಜ್ ಶೀಟ್ ನಲ್ಲಿನ ರಹಸ್ಯವೇನು?
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಇದ್ದ ಜಮೀನು ಬಸವರೆಡ್ಡಿ ಎಂಬುವರ ಹೆಸರಿನಲ್ಲಿತ್ತು. ಈ ಬಸವರೆಡ್ಡಿ ಕೂಡ ಸರಳವಾಸ್ತು ಕಂಪನಿಯ ಮಾಜಿ ಉದ್ಯೋಗಿ. ಗುರೂಜಿ ಕಂಪನಿ ಬಿಟ್ಟ ಬಳಿಕ ಮಹಾಂತೇಶ್, ಮಂಜುನಾಥ ಮತ್ತು ಬಸವರೆಡ್ಡಿ ಗುರೂಜಿ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು. ಹೀಗಾಗಿ ಬಸವರೆಡ್ಡಿ ಹತ್ತಿರ ಇದ್ದ ಜಮೀನನ್ನು ಮಹಾಂತೇಶ್ ಹೆಸರಿಗೆ ವರ್ಗಾಯಿಸಿ ಮಾರಾಟ ಮಾಡಲು ಸಂಚು ಮಾಡಿದ್ದರು.
ಬಳಿಕ ಆ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿ ಹಣ ಹಂಚಿಕೆ ಮಾಡಿಕೊಳ್ಳಲು ಪ್ಲಾನ್ ಆಗಿತ್ತು. ಆದರೆ ಗುರೂಜಿ ಕೊಲೆಯ ಸ್ಕೆಚ್ ನಲ್ಲಿ ಬಸವರೆಡ್ಡಿ ಪಾತ್ರವಿಲ್ಲ ಎನ್ನುವ ಅಂಶವೂ ಕೂಡ ಚಾರ್ಜ್ ಶೀಟ್ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.
ಸರಳ ವಾಸ್ತು ʼ ಎಂದೇ ಪ್ರಸಿದ್ಧಿ ಪಡೆದ ಸರಳ ವಾಸ್ತು ಚಂದ್ರಶೇಖರ್ ಗುರೂಜಿಯನ್ನು ನಗರದ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಕೊಲೆಗೈಯಲಾಗಿತ್ತು. ಗ್ರಾಹಕರ ಸೋಗಿನಲ್ಲಿ ಬಂದು ಚಾಕುವಿನಿಂದ ಇರಿದು ಸರಳ ವಾಸ್ತು ಗುರುಜೀ ಚಂದ್ರಶೇಖರ್ ಕೊಲೆ ಮಾಡಿದ್ದಾರೆ. ರಿಸೆಪ್ಷನ್‌ನಲ್ಲೇ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಕೊಲೆ ಮಾಡಿದ್ದರು.