ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಕಡಬ ಠಾಣಾ ಪೋಲಿಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ನೂಜಿಬಾಳ್ತಿಲದ ಖಾಸಗಿ ಶಾಲೆಯೊಂದರಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಯುವಕನೊಬ್ಬ ಪುಸಲಾಯಿಸಿ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಈ ಮೊದಲೇ ಆರೋಪಿ ಯುವಕನಿಗೆ ಬಾಲಕಿಯ ಮನೆಯವರು ಎಚ್ಚರಿಕೆ ನೀಡಿದ್ದರೂ ಯುವಕ ಕ್ಯಾರೇ ಅಂದಿರಲಿಲ್ಲ ಎನ್ನಲಾಗಿದೆ. ಅಲ್ಲದೆ ಆರೋಪಿ ಯುವಕ ಹೊರಗಿನವನಾಗಿದ್ದು, ಆತನಿಗೆ ಸ್ಥಳೀಯ ಯುವಕನೊಬ್ಬ ಆಶ್ರಯ ನೀಡಿದ್ದ ಎನ್ನಲಾಗಿದೆ.
ಸದ್ಯ ಆಶ್ರಯ ನೀಡಿದ ಸ್ಥಳೀಯ ವ್ಯಕ್ತಿಯನ್ನು ಪೋಲಿಸರು ತನಿಖೆಗಾಗಿ ವಶಕ್ಕೆ ಪಡೆದಿದ್ದು ಹಾಗೂ ಅತ್ಯಾಚಾರ ಎಸಗಿದ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಸಂತ್ರಸ್ತ ಬಾಲಕಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪೋಲಿಸರು ಪೊಕ್ಸೊ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.