ಸಮಗ್ರ ನ್ಯೂಸ್: ಕಳೆದ 35 ವರ್ಷಗಳ ಹಿಂದೆ ಪ್ರಸಾರವಾಗಿದ್ದ ಜನಪ್ರಿಯ ಧಾರಾವಾಹಿ ರಾಮಾಯಣ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? 80-90ರ ದಶಕದಲ್ಲಿ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದವು.
ರಮಾನಂದ್ ಸಾಗರ್ ನಿರ್ಮಾಣದ ಈ ಅಧ್ಧೂರಿ ಧಾರಾವಾಹಿಯಲ್ಲಿ ನಟ ಅರುಣ್ ಗೋವಿಲ್ ರಾಮನಾಗಿ ಮಿಂಚಿದ್ದರು. ಈ ಧಾರಾವಾಹಿ ಜನಪ್ರಿಯತೆ ಎಷ್ಟಿದೆ ಎಂದರೆ ಕಳೆದ ಬಾರಿ ಲಾಕ್ ಡೌನ್ ಸಮಯದಲ್ಲಿ ಇದನ್ನು ಮರು ಪ್ರಸಾರ ಮಾಡಲಾಯ್ತು. ಪ್ರಪಂಚದಲ್ಲೇ ಮನರಂಜನೆ ವಿಭಾಗದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಧಾರಾವಾಹಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಕಳೆದ ಏಪ್ರಿಲ್ 16ರಂದು ರಾತ್ರಿ 9 ಗಂಟೆಗೆ ಪ್ರಸಾರವಾದ ರಾಮಾಯಣ ಧಾರವಾಹಿಯನ್ನು ಭಾರತ ಸೇರಿದಂತೆ ಪ್ರಪಂಚದಾದ್ಯಂತ 7.7 ಕೋಟಿ ಜನರು ವೀಕ್ಷಿಸಿರುವುದು ವಿಶ್ವದಾಖಲೆಯಾಗಿತ್ತು. ಇದೀಗ ಅರುಣ್ ಗೋವಲ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಶ್ರೀರಾಮನ ಪಾತ್ರಧಾರಿ, ನಟ ಅರುಣ್ ಗೋವಿಲ್ ಕಾಲಿಗೆ ನಮಸ್ಕರಿಸಿದ್ದಾಳೆ. ಅರುಣ್ ಗೋವಿಲ್, ಅವರು ಇತ್ತೀಚೆಗೆ ವಿಮಾನ ನಿಲ್ದಾಣವೊಂದರಲ್ಲಿ ಇದ್ದಾಗ, ಅವರ ಬಳಿಗೆ ಆಗಮಿಸಿದ ದಂಪತಿಗಳು ಅವರಿಗೆ ನಮಸ್ಕರಿಸಿದ್ದಾರೆ. ಅದರಲ್ಲೂ, ಮಹಿಳೆಯೊಬ್ಬರು ಅವರಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ.
ರಾಮನ ಪಾತ್ರ ಮಾಡಿದ ಬಳಿಕ ನಟ ಅರುಣ್ ಗೋವಿಲ್ ಅವರನ್ನು ಜನರು ಈ ತರ ಗೌರವಿಸುತ್ತಿರುವುದು ಇದೇ ಮೊದಲೇನಲ್ಲ. ಹೀಗಾಗಿ ಇದನ್ನು ಸಹಜವಾಗಿ ಸ್ವೀಕರಿಸಿದ ಅರುಣ್ ಗೋವಿಲ್, ಆ ಮಹಿಳೆಗೆ ತಮ್ಮಲ್ಲಿದ್ದ ಶ್ರೀರಾಮ ಹೆಸರು ಮುದ್ರಿತ ಶಲ್ಯವೊಂದನ್ನು ಅವರ ಕೊರಳಿಗೆ ಹಾಕುತ್ತಾರೆ. ಮೊದಲಿಗೆ ಆಕೆಯು ಆ ವಸ್ತ್ರವನ್ನು ಸ್ವೀಕರಿಸಲು ನಿರಾಕರಿಸಿದರೂ, ಆನಂತರ ಗೋವಿಲ್ ಬಲವಂತ ಮಾಡಿದ್ದಕ್ಕೆ ಆ ವಸ್ತ್ರವನ್ನು ಪಡೆದು ಅದನ್ನು ಮಡಚಿ ಭಕ್ತಿಯಿಂದ ಕಣ್ಣಿಗೆ ಒತ್ತಿಕೊಳ್ಳುತ್ತಾಳೆ.