ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದ ಪಾಲಡ್ಕದ ಶಂಕರ್ ನಾಯ್ಕ ಎಂಬ ವರ ಮನೆಯ ಹತ್ತಿರ ಹಾದುಹೋಗುವ ವಿದ್ಯುತ್ ತಂತಿ ಅಪಾಯಕಾರಿಯಾಗಿದ್ದು, ಇದನ್ನು ಸರಿಪಡಿಸುವಂತೆ ಮೆಸ್ಕಾಂ ಇಲಾಖೆಯವರಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಿದೆ.
ವಿದ್ಯುತ್ ಲೈನ್ ನೆಲದಿಂದ ಸುಮಾರು ಒಂಬತ್ತು ಅಡಿ ಎತ್ತರದಲ್ಲಿ ಇದ್ದು ಆ ಜಾಗದಲ್ಲಿ ಇರುವ ಮನೆಯಲ್ಲಿ ಸಣ್ಣ ಮಕ್ಕಳಿರುವುದರಿಂದ ವಿದ್ಯುತ್ ಲೈನ್ ನಿಂದ ತೊಂದರೆಯಾಗುತ್ತಿದೆ. ಪಕ್ಕದಲ್ಲೇ ಇರುವ ತೆಂಗಿನ ಮರಕ್ಕೆ ವಿದ್ಯುತ್ ತಂತಿ ತಾಗುತ್ತಿದ್ದು, ಅಪಾಯವಾಗುವ ಸಾಧ್ಯತೆ ಹೆಚ್ಚು.
ಈ ಮೊದಲು ಹಲವು ಬಾರಿ ಮೆಸ್ಕಾಂ ಇಲಾಖೆಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಆದ ಕಾರಣ ತಕ್ಷಣ ವಿದ್ಯುತ್ ಲೈನ್ ಅನ್ನು ಸರಿಪಡಿಸಿಕೊಡಬೇಕೆಂದು ಸುಳ್ಯ ಮೆಸ್ಕಾಂ ಇಲಾಖೆಯವರಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಮೆಸ್ಕಾಂಗೆ ಮನವಿ ಮಾಡಿದ್ದು, ಸಮಸ್ಯೆ ಬಗೆಹರಿಯದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ವೇದಿಕೆ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ತಿಳಿಸಿದ್ದಾರೆ.