ಸಮಗ್ರ ನ್ಯೂಸ್: ಆರ್ ಎಸ್ಎಸ್ ಕಾರ್ಯಕರ್ತ ಕಡೂರಿನ ಡಾ. ಶಶಿಧರ್ ಚಿಂದಿಗೆರೆ ಅವರ ಕಾರಿನ ಮೇಲೆ ಕ್ಷುಲ್ಲಕ ಬರವಣಿಗೆ ಬರೆದ ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸರು ಇಬ್ಬರು ಅಪ್ರಾಪ್ತರನ್ನು ಬಂಧಿಸಿದ್ದಾರೆ.
ಕಾರಿನ ಮೇಲೆ ‘ಕಿಲ್ ಯೂ, ಜಿಹಾದಿ ಹಾಗೂ ಇನ್ನಿತರ ಅಶ್ಲೀಲ ಬರಹಗಳನ್ನು ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಸೆ.29ರಂದು ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನೂತನ ಮಾದರಿಯ ಕಾರು ಇದಾಗಿದ್ದು, ಇಂತಹ ಕಾರು ಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಲ್ಲಿನಲ್ಲಿ ಬರಹ ಗೀಚಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳ ಮೇಲೆ ಐಪಿಸಿ 427,505(2),506 ರಡಿ ಪ್ರಕರಣ ದಾಖಲಿಸಲಾಗಿದೆ.