ಕೊಟ್ಟಿಗೆಹಾರ: ಕಳ್ಳಬಟ್ಟಿ ಅಡ್ಡೆ ಮೇಲೆ ಪೊಲೀಸ್ ದಾಳಿ

ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಬಾಳೂರು ಠಾಣಾ ವ್ಯಾಪ್ತಿಯ ಮಲೆಮನೆ ಎಂಬಲ್ಲಿ ಬಾಳೂರು ಪೊಲೀಸರು ಅಕ್ರಮ ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ ನಡೆಸಿದ್ದು ಕಳ್ಳಬಟ್ಟಿ ಹಾಗೂ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

Ad Widget ... ..

ಮಲೆ ಮನೆ ಗ್ರಾಮದ ಸುರೇಶ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಬಾಳೂರು ಠಾಣಾಧಿಕಾರಿ ಪವನ್ ಹಾಗೂ ಸಿಬ್ಬಂದಿ ಸುರೇಶ ಎಂಬವರು ಕಳ್ಳಬಟ್ಟಿ ತಯಾರಿಸುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ.
ಈ ವೇಳೆ 200 ಲೀಟರ್ ಬೆಲ್ಲದ ಕೊಳೆ ಹಾಗೂ ಎರಡು ಲೀಟರ್ ಕಳ್ಳಬಟ್ಟಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂದಿಸಿದ್ದಾರೆ.

Ad Widget

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಪವನ್ ಕುಮಾರ್ ಸಿಬ್ಬಂದಿಯಾದ ರಾಜೇಂದ್ರ ಜಾಫರ್ ಅಭಿಲಾಶ್ ಪ್ರದೀಪ್ ವಸಂತ್ ಸತೀಶ್ ಮೊದಲಾದವರು ಇದ್ದರು.

Leave a Comment

Your email address will not be published. Required fields are marked *