ಸಮಗ್ರ ನ್ಯೂಸ್: ಮೀಶೋ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಡ್ರೋನ್ ಕ್ಯಾಮರಾ ಆರ್ಡರ್ ಮಾಡಿದ್ದಾತನಿಗೆ ಒಂದು ಕೆಜಿ ಆಲೂಗಡ್ಡೆ ಡೆಲಿವರಿಯಾದ ಪ್ರಸಂಗ ನಡೆದಿದೆ.
ಬಿಹಾರದ ವ್ಯಕ್ತಿಯೊಬ್ಬರು ಮೀಶೋದಲ್ಲಿ ಡ್ರೋನ್ ಕ್ಯಾಮರಾವನ್ನು ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಡ್ರೋನ್ ಕ್ಯಾಮರಾ ಬದಲಾಗಿ ಒಂದು ಕೆಜಿ ಆಲೂಗಡ್ಡೆ ಪಾರ್ಸೆಲ್ ಬಂದಿದೆ. ಡೆಲಿವರಿ ಬಾಯ್‌ಗೆ ಸ್ಥಳದಲ್ಲೇ ಅದನ್ನು ಅನ್‌ಬಾಕ್ಸ್ ಮಾಡಲು ಹೇಳಿದ್ದು, ನಿಯಮ ಪ್ರಕಾರ ಆತ ಮಾಡಿರಲಿಲ್ಲ. ಆದರೆ ಬಾಕ್ಸ್ ತೆರೆದು ನೋಡುವಾಗ ಆಲೂಗಡ್ಡೆ ಪತ್ತೆಯಾಗಿದೆ.
ಮೀಶೋದಿಂದ ಆಲೂಗಡ್ಡೆ ಪಾರ್ಸೆಲ್ ಬಂದಿರುವುದನ್ನು ನಳಂದದ ಪರ್ವಾಲ್‌ಪುರದ ಉದ್ಯಮಿ ಚೇತನ್ ಕುಮಾರ್ ಎಂಬುವವರು ವೀಡಿಯೋ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅನ್ ಸೀನ್ ಇಂಡಿಯಾದಲ್ಲಿ ಇದು ವೀಕ್ಷಣೆಗೆ ಲಭ್ಯವಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.