ಸಮಗ್ರ ನ್ಯೂಸ್: ಪಿಎಫ್‌ಐ ಮೇಲಿನ ಪೊಲೀಸ್ ದಾಳಿ ಮುಸ್ಲಿಂ ಸಮಾಜದ ಮೇಲಿನ ದಾಳಿಯಾಗುವುದಿಲ್ಲ ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯುಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಪಿಎಫ್‌ಐ ನಾಯಕರ ಮೇಲೆ ಪೊಲೀಸರ ದಾಳಿ ಇದು ಇಡೀ ಮುಸ್ಲಿಂ ಸಮಾಜದ ಮೇಲಿನ ದಾಳಿಯಲ್ಲ. ಪಿಎಫ್‌ಐ ಮೇಲಿನ ದಾಳಿಯ ವಿರುದ್ಧ ರಾಜ್ಯದ, ಜಿಲ್ಲೆಗಳ ಧಾರ್ಮಿಕ ಗುರುಗಳು, ಉಲೇಮಾಗಳು, ಸಂಘಟನೆಗಳು ಯಾರೂ ಅಪಸ್ವರ ಎತ್ತಿಲ್ಲ. ಮುಸ್ಲಿಂ ಧರ್ಮದ ಸಹಿತ ಎಲ್ಲಾ ಧರ್ಮಗಳು ನ್ಯಾಯಯುತ ತನಿಖೆಗೆ ಎಲ್ಲರೂ ಬೆಂಬಲ ಕೊಡುತ್ತಾರೆ” ಎಂದು ಹೇಳಿದ್ದಾರೆ.
ಈ ದಾಳಿ ಮುಸ್ಲಿಂ ಸಮುದಾಯದ ಮೇಲಿನ ದಾಳಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ ಎಂಬ ಮಾಧ್ಯದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವ ಸಂಘಟನೆಗಳನ್ನು ಬ್ಯಾನ್ ಮಾಡಬೇಕು, ಇನ್ನೇನು ಮಾಡಬೇಕೆಂಬುದು ತನಿಖೆಯ ಆಧಾರದಲ್ಲಿ ತಿಳಿಯುವಂತದ್ದು. ಸಮಾಜದಲ್ಲಿ ಅಶಾಂತಿ ಹುಟ್ಟುವ, ದ್ವೇಷ ಆಧಾರಿತ ಕೃತ್ಯ ನಡೆಯುತ್ತಿದ್ದರೆ ಎಲ್ಲ ಸಂಘಟನೆಗಳಿಗೆ ಸಮಾನವಾದ ಕಾನೂನು ತನ್ನಿ. ಇದರಿಂದ ದೇಶದಲ್ಲಿ ನ್ಯಾಯ, ತಾರತಮ್ಯ ರಹಿತವಾದ ಸಮಾಜ ಅಥವಾ ಆಡಳಿತಕ್ಕೆ ಎಲ್ಲರೂ ಬೆಂಬಲ ಕೊಡುತ್ತಾರೆ ಎಂದು ಹೇಳಿದರು.