ಸಮಗ್ರ ನ್ಯೂಸ್: ವಿಧವೆಯ ಮನೆಗೆ ಬಂದ ಗಂಡನ ಸ್ನೇಹಿತನೋರ್ವ, ಆಕೆಗೆ ಬಾಳು ನೀಡುತ್ತೇನೆ ಅಂತ ಆಕೆಯನ್ನು ಪ್ರೀತಿಸಿ ಕೊನೆಗೆ ಆಕೆಯನ್ನು ಕಂಟ್ರೋಲ್ ಮಾಡಲು ನೋಡಿದಾಗ ಆಕೆ ಆತ ಹೇಳಿದ ಹಾಗೆ ಕೇಳಲಿಲ್ಲ ಅಂತ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದ 15 ನೇ ವಾರ್ಡ್ ಬಡಾವಣೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ನಗರ ಸಭೆಯಲ್ಲಿ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಸುಮಾ ಎಂಬಾಕೆಯ ಪತಿ ಕಳೆದ ವರ್ಷ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ನಂತರ ಗಂಡ ಸತ್ತ ಮೇಲೆ ಸುಮಾಗೆ ಸಹಾಯ ಮಾಡಲು ಮನೆಗೆ ಬಂದ ಆಕೆಯ ಗಂಡನ ಸ್ನೇಹಿತ ಎಸ್.ಎನ್.ಪ್ರಶಾಂತ್ ಕ್ರಮೇಣವಾಗಿ ಸುಮಾಳಿಗೆ ಬಾಳು ನೀಡುವುದಾಗಿ ಹೇಳಿ ಆಕೆಯನ್ನು ಪ್ರೀತಿ ಮಾಡುತ್ತಿದ್ದನು. ಆದರೆ ಆಕೆ ತನ್ನನ್ನು ಬಿಟ್ಟು ಇನ್ಯಾರೊ ಜೊತೆ ಸಲುಗೆಯಿಂದ ಇದ್ದಾಳೆ ಅಂತ ಮನನೊಂದು ಭಾನುವಾರ ತಡರಾತ್ರಿ ಸುಮಾ ಒಡೆತನದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಾಯುವುದಕ್ಕೂ ಮುನ್ನ ಸ್ಥಳಿಯ ನಗರಸಭಾ ಸದಸ್ಯ ಅಂಬರೀಶನೇ ತನ್ನ ಸಾವಿಗೆ ಕಾರಣ ಅಂತ ವೀಡಿಯೋ ರೆಕಾರ್ಡ್ ಮಾಡಿ ಸತ್ತಿದ್ದಾನೆ. ಇದರಿಂದ ಮೃತನ ಸಂಬಂಧಿಗಳು ಸುಮಾ ಹಾಗೂ ಅಂಬರೀಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಸ್ಥಳೀಯ ನಗರಸಭಾ ಸದಸ್ಯ ಅಂಬರೀಶ್, ಸುಮಾ ಗಂಡನ ಬಡ್ಡಿ ವ್ಯವಹಾರ ನೋಡಿಕೊಂಡರೆ, ಇತ್ತ ಮೃತ ಪ್ರಶಾಂತ್, ಸುಮಾಳ ಬೇಕಾದ ಕಡೆ ಕರೆದುಕೊಂಡು ಹೋಗಿ ಬರುತ್ತಿದ್ದ. ಇತ್ತೀಚೆಗೆ ಸುಮಾಳನ್ನು ಪ್ರೀತಿ ಪ್ರೇಮದ ಬಲೆಯಲ್ಲಿ ಬಂಧಿ ಮಾಡಿ, ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದ. ಆದರೆ ತಮ್ಮಿಬ್ಬರ ಪ್ರೀತಿಗೆ ಅಂಬರೀಶ್ ಅಡ್ಡಿ ಬಂದಿದ್ದು, ಸುಮಾ ತನ್ನ ಬದಲು ಅಂಬರೀಶ್ ಜೊತೆ ಸಲುಗೆಯಿಂದ ಇದ್ದಾಳೆ ಅಂತ ಸುಮಾಳಿಗೆ ಟಾರ್ಚರ್ ಮಾಡುತ್ತಿದ್ದ ಎನ್ನಲಾಗಿದೆ.
ಗಂಡನನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದ ವಿಧವೆಯ ಮೇಲೆ ಕಣ್ಣು ಹಾಕಿದ, ಗಂಡನ ಸ್ನೇಹಿತ. ಸಹಾಯ ಮಾಡುವ ನೆಪದಲ್ಲಿ, ಆಕೆಯನ್ನು ಪ್ರೀತಿಸಿ ಇನ್ನೇನು ಮಾಡಲು ಹೊರಟಿದ್ದನೋ, ಗೊತ್ತಿಲ್ಲ. ಆದರೆ ವಿವಾಹಿತರ ಪ್ರೇಮ ಪ್ರಕರಣ ಆತ್ಮಹತ್ಯೆಯಲ್ಲಿ ಕೊನೆಯಾಗಿದೆ.