ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಅಂಬೇಡ್ಕರ್ ಭವನ ಸುಮಾರು ಏಳು ವರ್ಷಗಳ ಹಿಂದೆ ಪ್ರಾರಂಭವಾಗಿದ್ದರೂ ಅಂಬೇಡ್ಕರ್ ಭವನ ಇದುವರೆಗೂ ಸಂಪೂರ್ಣವಾಗಿಲ್ಲ. ತಕ್ಷಣ ಕಾಮಗಾರಿ ಪೂರ್ಣಗೊಳಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಅಂಬೇಡ್ಕರ್ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಹಲವು ಸಭೆಗಳಲ್ಲಿ ಒಂದು ವರ್ಷದೊಳಗಡೆ ಸಂಪೂರ್ಣ ಮಾಡಿಕೊಡುತ್ತೇವೆ ಎಂದು ಸುಳ್ಳು ಭರವಸೆಯನ್ನು ಕೊಟ್ಟು ಸುಮಾರು 7 ವರ್ಷ ಕಳೆದಿದೆ ಇನ್ನು ಸಂಪೂರ್ಣವಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಕೆಲಸ ಸ್ಟಾರ್ಟ್ ಮಾಡುತ್ತಾರೆ, ಮತ್ತೆ ಅರ್ಧದಲ್ಲಿ ನಿಲ್ಲುತ್ತದೆ, ಮತ್ತೆ ಇವಾಗ ಎಲೆಕ್ಷನ್ ಹತ್ತಿರ ಬಂದಿದೆ ಹಾಗಾಗಿ ಅಷ್ಟು ದೊಡ್ಡ ಅಂಬೇಡ್ಕರ್ ಭವನದ ಕೆಲಸ ನಾಲ್ಕು ಜನರು ಮಾಡುತ್ತಿದ್ದಾರೆ ಇದೇ ರೀತಿ ನಾಲ್ಕೇ ಜನ ಕೆಲಸ ಮಾಡಿದರೆ ಇನ್ನು ಹತ್ತು ವರ್ಷ ಕಳೆದರೂ ಅಂಬೇಡ್ಕರ್ ಭವನ ಮಾತ್ರ ಆಗುವುದಿಲ್ಲ ಅದೇ ರೀತಿ ಮೇಲ್ವರ್ಗದ ಬಂಟರ ಭವನ ಗೌಡ ಸಮಾಜ ಇವೆಲ್ಲವೂ ಒಂದು ವರ್ಷದಲ್ಲಿ ಸಂಪೂರ್ಣವಾಗಿದೆ.
ಆದರೆ ದಲಿತರ ಅಂಬೇಡ್ಕರ್ ಭವನ ಮಾತ್ರ ಏಳು ವರ್ಷ ಕಳೆದರೂ ಸಂಪೂರ್ಣವಾಗಿಲ್ಲ. ಸುಳ್ಯ ತಾಲೂಕು ಮೀಸಲಾತಿ ಕ್ಷೇತ್ರ ಸುಮಾರು 30 ವರ್ಷಗಳಿಂದ ಒಬ್ಬ ದಲಿತ ಶಾಸಕರಾದ ಎಸ್ ಅಂಗಾರವರು ನಿರಂತರ ಗೆದ್ದು ಒಂದು ಅಂಬೇಡ್ಕರ್ ಭವನ ಸಂಪೂರ್ಣಗೊಳಿಸುವ ಯೋಗ್ಯತೆ ಇಲ್ಲ ಅದೇ ರೀತಿ ಉಬರಡ್ಕ ಗ್ರಾಮದ ಕೊಡಿಯಾಲಬೈಲು ದಲಿತ ಕಾಲೋನಿ ಗೆ ಬಂದಂತ 30ಲಕ್ಷ ಅನುದಾನದ ಶೌಚಾಲಯ ಮತ್ತು ಸ್ಥಾನ ಘಟಕದ ಸಂಕೀರ್ಣ ಕಟ್ಟಡ ಸ್ಥಳ ಬದಲಾವಣೆ ಮಾಡಿ ಹಿಂದು ರುದ್ರಭೂಮಿ ಒಳಗಡೆ ಶಾಸಕರ ಶಿಫಾರಸು ಮೇರೆಗೆ ನಿರ್ಮಿಸಿದ್ದಾರೆ ಇದರಿಂದ ದಲಿತ ಜನಾಂಗಕ್ಕೆ ತುಂಬಾ ಅನ್ಯಾಯ ಮಾಡಿದ್ದಾರೆ ಒಬ್ಬ ದಲಿತ ಶಾಸಕನಾಗಿ ದಲಿತರಿಗೆ ಈ ರೀತಿ ಅನ್ಯಾಯ ಮಾಡುವುದು ಸರಿಯಲ್ಲ ಆದಕಾರಣ ಆದಷ್ಟು ಬೇಗ ಈ ಒಂದು ಅಂಬೇಡ್ಕರ್ ಭವನ ನಿರ್ಮಿಸಿಕೊಡಬೇಕು ಮತ್ತು ಕೊಡಿಯಾಲ ಬೈಲು ದಲಿತ ಕಾಲೋನಿಗೆ ಬಂದಿದ್ದ ಶೌಚಾಲಯ ಮತ್ತು ಸ್ಥಾನ ಘಟಕದ ಸಂಕೀರ್ಣ ಕಟ್ಟಡವನ್ನು ಕೊಡಿಯಾಲಬೈಲು ದಲಿತ ಕಾಲೋನಿಯಲ್ಲಿ ನಿರ್ಮಿಸಿ ಕೊಡಬೇಕು. ಈ ಕೆಲಸ ಸಂಪೂರ್ಣವಾಗದಿದ್ದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆ ವತಿಯಿಂದ ಸುಳ್ಯ ತಾಲೂಕು ಕಚೇರಿಯ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ ತಿಳಿಸಿದ್ದಾರೆ.