ಪಾಶ್ಚಾತ್ಯ ಸಂಸ್ಕ್ರತಿಗೆ ಮಾರುಹೋಗಿ ಭಾರತೀಯ ಸಂಸ್ಕಾರ ಮರೆಯಾಗುತ್ತಿದೆ. ಆದ್ದರಿಂದ ಇಂದು ಸಂಸ್ಕ್ರತಿಗಳ ಉಳಿವಿಗೆ ಮಕ್ಕಳಿಗೆ ಸಂಸ್ಕಾರ ಕಲಿಸುವ ಅಗತ್ಯವಿದೆ. ಇವನ್ನು ಹಿರಿಯರನ್ನು ಗೌರವಿಸುವ, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಹೇಳಿದರು.
ಅವರು ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ, ವಾರ್ಷಿಕ ಮಹಾಸಭೆ, ಸ್ಪಂದನ ಗೆಳೆಯರ ಬಳಗ ಅಡ್ತಲೆ ಇದರ ಸಹಯೋಗದಲ್ಲಿ ಧಾರ್ಮಿಕ ಶಿಕ್ಷಣ ತರಗತಿ ಉದ್ಘಾಟನೆ ಹಾಗು ಉಚಿತ ಆಯುಷ್ಮಾನ್ ಆ.ಭಾ ಕಾರ್ಡ್ ನೋಂದಣಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆನ್ನು ನಾಗರಿಕ ಹಿತರಕ್ಷಣ ವೇದಿಕೆಯ ಅಡ್ತಲೆ ಇದರ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ವಹಿಸಿದ್ದರು. ವೇದಿಕೆಯಲ್ಲಿ ಧಾರ್ಮಿಕ ಪ್ರವಚನಕಾರರಾಗಿ ಸನಾತನ ಹಿಂದೂ ಜನ ಜಾಗೃತಿ ಸಮಿತಿ ಸುಳ್ಯ ಇದರ ಪ್ರವರ್ತಕರಾದ ಧನಂಜಯ ಬಿ., ಮುಖ್ಯ ಅತಿಥಿಗಳಾಗಿ ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ವಿನಯ ಬೆದ್ರುಪಣೆ, ಗ್ರಾ.ಪಂ. ಉಪಾಧ್ಯಕ್ಷೆ ಶ್ವೇತಾ ಅರಮನೆಗಯ, ಸದಸ್ಯ ಕೇಶವ ಅಡ್ತಲೆ,ಸುಜಯಾ ಲೋಹಿತ್ ಮೇಲಡ್ತಲೆ ಉಪಸ್ಥಿತರಿದ್ದರು. ತೀರ್ಥರಾಮ ಅಡ್ತಲೆ, ಗೋಪಾಲ ಪಿಂಡಿಮನೆ, ಚಂದ್ರಶೇಖರ ಬೆದ್ರುಪನೆ, ನಾರಾಯಣ ಮೇಲಡ್ತಲೆ, ಲೋಕಯ್ಯ ಪೂಜಾರಿ ಮನೆ ಗೌರವ ಅತಿಥಿಗಳಾಗಿದ್ದರು.
ಲೋಹಿತ್ ಮೇಲಡ್ತಲೆ ಇವರು ಸ್ವಾಗತಿಸಿ ಹೋರಾಟ ಸಮಿತಿ ಅಧ್ಯಕ್ಷ ಮೋಹನ್ ಅಡ್ತಲೆ ಧನ್ಯವಾದಗೈದರು. ರಂಜಿತ್ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.
ನಾಗರಿಕ ಹಿತರಕ್ಷಣ ವೇದಿಕೆ ಅಡ್ತಲೆ ಇದರ ನೂತನ ಆಡಳಿತ ಸಮಿತಿಯ ರಚನೆ:
ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ ಇದರ ಒಂದು ವರ್ಷದ ಅವದಿಗೆ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಹರಿಪ್ರಸಾದ್ ಅಡ್ತಲೆ , ಉಪಾಧ್ಯಕ್ಷರಾಗಿ ವಿನಯ್ ಬೆದ್ರುಪಣೆ, ಲೋಹಿತ್ ಮೇಲಡ್ತಲೆ, ಸ್ವಾತಿಕ್ ಕಿರ್ಲಾಯ, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ಅಡ್ತಲೆ, ಜತೆ ಕಾರ್ಯದರ್ಶಿಯಾಗಿ ಮೋಹನ್ ಕಿನಾಲ ಅಡ್ತಲೆ, ಖಜಾಂಜಿಯಾಗಿ ಓಂ ಪ್ರಸಾದ್ ಪಿಂಡಿಮನೆ ಆಯ್ಕೆಯಾದರು.
ಸದಸ್ಯರಾಗಿ ಕೇಶವ ಮೇಲಡ್ತಲೆ, ದಯಾನಂದ ಬೆದ್ರುಪಣೆ , ಮೋಹನ್ ಪಂಜದ ಬೈಲು ಅಡ್ತಲೆ, ಸುನಿಲ್ ಪಿಂಡಿಮನೆ, ಗಿರೀಶ್ ಅಡ್ಕ, ರಕ್ಷಿತ್ ಚೀಮಾಡು, ರತನ್ ಕಿರ್ಲಾಯ, ತ್ಯಾಗರಾಜ್ ಜೋಡಿಪಣೆ, ದಾಮೋದರ ಪೂಜಾರಿ ಮನೆ, ಪುರುಷೋತ್ತಮ ಬೆದ್ರುಪಣೆ , ಅಶೋಕ ಬೆದ್ರುಪಣೆ , ಸಂತೋಷ್ ಪಿಂಡಿಮನೆ, ಸುನಿಲ್ ಆಡ್ತಲೆ, ಲಿಂಗಪ್ಪ ಪಡ್ಡಂಬೈಲು, ಹರೀಶ್ ಅಡ್ತಲೆ , ದುರ್ಗಾ ಪ್ರಸಾದ್ ಮೇಲಡ್ತಲೆ ಹಾಗೂ ನೂತನ ಮಹಿಳಾ ಸದಸ್ಯರಾಗಿ ರೇಖಾ ಪಾನತ್ತಿಲ, ಶ್ಯಾಮಲ ಅಡ್ತಲೆ, ಸುಶ್ಮಿತಾ ಬೆದ್ರುಪಣೆ, ಸೌಮ್ಯಾ ಮೇಲಡ್ತಲೆ, ಹರ್ಷಿತಾ ಬೆದ್ರುಪಣೆ, ವೀಣಾ ಅಡ್ತಲೆ, ಬೇಬಿ ಕಲ್ಲುಗದ್ದೆ, ವಿದ್ಯಾ ಬೆದ್ರುಪಣೆ ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ಭವಾನಿ ಶಂಕರ ಅಡ್ತಲೆ, ಶಶಿಕುಮಾರ್ ಉಳುವಾರು ಅಡ್ತಲೆ, ಹರಿಶ್ಚಂದ್ರ ಮೇಲಡ್ತಲೆ, ಗೋಪಾಲಕೃಷ್ಣ ಪಿಂಡಿಮನೆ , ಶ್ರೀಧರ ನಾರ್ಕೋಡು ಕಿರ್ಲಾಯ, ಚಂದ್ರಶೇಖರ ಚೋಡಿಪಣೆ, ಗಣೇಶ್ ಮಾಸ್ತರ್ ಅಡ್ತಲೆ, ಚಿದಾನಂದ ಮಾಸ್ತರ್ ಅಡ್ತಲೆ ಇವರು ಆಯ್ಕೆಯಾದರು.