ಸಮಗ್ರ ನ್ಯೂಸ್: ಅಂಬೇಡ್ಕರ್ ರಕ್ಷಣೆ ವೇದಿಕೆಗೆಯ ಮನವಿಗೆ ಪೊಲೀಸ್ ಇಲಾಖೆ ಸ್ಪಂದಸಿದ್ದು ಅಶ್ವಿನಿಯ ಗಂಡ ಸೇರಿ 16 ಜನರ ಮೇಲೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹುಣಸೂರು ಪ್ರೀತಿಸಿ ವಿವಾಹವಾದ ಜೋಡಿ ಒಂದು ವರ್ಷಕ್ಕೆ ಬೇರ್ಪಟ್ಟಿದ್ದು, ಹೆತ್ತವರು ಹಾಗೂ ಸಂಬಂಧಿಕರ ಚಿತಾವಣೆಯಿಂದ ಪತಿರಾಯ ಕೈಕೊಟ್ಟಿದ್ದಾನೆ. ಅದಲ್ಲದೆ ಜಾತಿನಿಂದನೆ, ಅಪಪ್ರಚಾರ ಮಾಡಿ ಕೊಲೆ ಬೆದರಿಕೆ ಹಾಕಿ ಪತ್ನಿಯನ್ನು ದೂರ ಮಾಡಿದ ಹಿನ್ನೆಲೆ ವಂಚನೆಗೆ ಒಳಗಾದ ವಿವಾಹಿತೆ ಅಶ್ವಿನಿ ಅವರು ಹುಣಸೂರು ಗ್ರಾಮಾಂತರ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದರು.
ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ನನಗೆ ನ್ಯಾಯ ಕೊಡಿಸಿ ಎಂದು ಅಶ್ವಿನಿ ಅವರು ಅಂಬೇಡ್ಕರ್ ರಕ್ಷಣಾ ವೇದಿಕೆ ಮನವಿ ಮಾಡಿದ್ದರು.
ಈ ವೇಳೆ ತಕ್ಷಣ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಶ್ವಿನಿ ಅವರ ಗಂಡ ಸೇರಿದಂತೆ ಗಂಡನ ಕುಟುಂಬದ 16 ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.