ಸಮಗ್ರ ನ್ಯೂಸ್: ಪ್ರೀತಿಸಿ ವಿವಾಹವಾದ ಒಂದೇ ವರ್ಷಕ್ಕೆ ಸಂಸಾರದಲ್ಲಿ ಬಿರುಕು ಬಿಟ್ಟಿದ್ದು,ಪತ್ನಿಗೆ ಪತಿ ಕೈಕೊಟ್ಟಿರುವ ಘಟನೆ ಬಗ್ಗೆ ಪತ್ನಿ ಠಾಣೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸದಕ್ಕೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ಹುಣಸೂರು ತಾಲೂಕಿನ ಮರೂರು ಗ್ರಾಮದ ಅಭಿಷೇಕನನ್ನು ಅಶ್ವಿನಿ ಎಂಬಾಕೆ ಜೂನ್ 2021ರಲ್ಲಿ ಪ್ರೀತಿಸಿ ಇಬ್ಬರ ಕುಟುಂಬದಲ್ಲೂ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದರು. ಆದರೆ ಇದೀಗ ಕೆಲ ದಿನಗಳಿಂದ ಇಬ್ಬರನ್ನು ಬೇರ್ಪಡಿಸುವ ಪ್ರಯತ್ನ ನಡೆದಿದೆ. ಇದಕ್ಕೆ ಅಕೆಯ ಜಾತಿ ಕಾರಣ ಮತ್ತು ಅಶ್ವಿನಿ ಮೇಲೆ ಇಲ್ಲ ಸಲ್ಲದ ಅಪಪ್ರಚಾರ ಮಾಡಿದ್ದಾರೆ. ಅಲ್ಲದೆ ವಾಟ್ಸಪ್ ನಲ್ಲಿ ಬೆತ್ತಲೆ ಫೋಟೋ ಹಾಕುತ್ತಿದ್ದಾಳೆ ಎಂದು ಪ್ರಚಾರ ಮಾಡಿದ್ದಾರೆ.
ಇದೇ ನೆಪಾ ಇಟ್ಟುಕೊಂಡು ಪತಿ ಅಭಿಷೇಕಿಗೆ ಮತ್ತೊಂದು ಮದುವೆ ಮಾಡುವ ಉದ್ದೇಶದಿಂದ ಈ ರೀತಿಯ ನೆಪ ಮಾಡಿದ್ದಾರೆ. ನನ್ನ ಗಂಡನ ಮನೆಯವರು ಮತ್ತು ಅವರ ಕುಟುಂಬದವರು ಜಾತಿನಿಂದನೆ ಮಾಡಿ ಹಲ್ಲೇ, ಕೊಲೆಬೆದರಿಕೆ ಮಾಡ್ಡಿದ್ದಾರೆ. ಹಾಗಾಗಿ ಗಂಡನ ಕುಟುಂಬದ 16 ಜನರ ಮೇಲೆ ಕಂಪ್ಲೇಂಟ್ ಮಾಡಿ ನನಗೆ ನ್ಯಾಯ ಕೊಡಿಸಿ ಎಂದು ಹುನ್ಸೂರು ಗ್ರಾಮಾಂತರ ಠಾಣೆಯಲ್ಲಿ ಅಶ್ವಿನಿ ಅವರು ಕಂಪ್ಲೇಂಟ್ ಕೊಟ್ಟಿದ್ದಾರೆ.
ಆದರೆ ಆ ಕಂಪ್ಲೇಂಟ್ ಯಾವುದೇ ಸ್ಪಂದನೆ ಇಲ್ಲದೆ ಅಶ್ವಿನಿ ಅವರು ಅಂಬೇಡ್ಕರ್ ರಕ್ಷಣೆ ವೇದಿಕೆಗೆ ನನಗೆ ನ್ಯಾಯ ಕೊಡಿಸುವಂತೆ ತಿಳಿಸಿದ್ದಾರೆ. ಆದ ಕಾರಣ ತಕ್ಷಣ ಅಶ್ವಿನಿ ಅವರಿಗೆ ಆಗಿರುವಂತ ಅನ್ಯಾಯಕ್ಕೆ ಹುಣಸೂರು ಗ್ರಾಮಾಂತರ ಪೊಲೀಸರು ತಕ್ಷಣ ಆರೋಪಿಗಳ ಮೇಲೆ ತಕ್ಷಣ ಎಫ್ ಐ ಆರ್ ದಾಖಲು ಮಾಡಬೇಕು. ಇಲ್ಲದಿದ್ದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷರು ಪಿ.ಸುಂದರ ಪಾಟಾಜೆಯವರು ಮಾಧ್ಯಮದಕ್ಕೆ ತಿಳಿಸಿದ್ದಾರೆ.