ಬೆಂಗಳೂರು: ಭಾರತ ರತ್ನ ಪುರಸ್ಕೃತ ವಿಜ್ಞಾನಿ ಸಿ.ಎನ್.ಆರ್ ರಾವ್ ಪ್ರತಿಷ್ಠಿತ ಅಂತಾರಾಷ್ಟ್ರೀಯ ಇಎನ್ ಐ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಇಂಧನ ಸಂಗ್ರಹಣೆಯ ಸಂಶೋಧನೆಗಾಗಿ ಈ ಪ್ರಶಸ್ತಿ ಸಂದಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.
ಶಕ್ತಿ ಸಂಶೋಧನೆಯಲ್ಲಿ ನೊಬೆಲ್ ಪ್ರಶಸ್ತಿ ಎಂದು ಗುರುತಿಸಲಾಗಿರುವ
ಇದನ್ನು ಎನರ್ಜಿ ಫ್ರಾಂಟಿಯರ್ ಪ್ರಶಸ್ತಿ ಎಂದು ಕರೆಯಲಾಗುತ್ತದೆ. ರೋಮ್ ನಲ್ಲಿ ಮುಂಬರುವ ಅಕ್ಟೋಬರ್ 14 ರಂದು ನಡೆಯಲಿರುವ ಸಮಾರಂಭದಲ್ಲಿ ಅಧಿಕೃತವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಪ್ರೊಫೆಸರ್ ರಾವ್ ಶಕ್ತಿಯ ಮೂಲವಾಗಿ ಹೈಡ್ರೋಜನ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಹೈಡ್ರೋಜನ್ ಸಂಗ್ರಹಣೆ, ಹೈಡ್ರೋಜನ್ ನ ದ್ಯುತಿ ರಾಸಾಯನಿಕ ಮತ್ತು ಎಲೆಕ್ಟ್ರೋಕೆಮಿಕಲ್ ಉತ್ಪಾದನೆ, ಹೈಡ್ರೋಜನ್ ನ ಸೌರ ಉತ್ಪಾದನೆ ಮತ್ತು ಲೋಹವಲ್ಲದ ವೇಗವರ್ಧನೆ ಅವರ ಕೆಲಸದ ಪ್ರಮುಖ ಅಂಶಗಳಾಗಿವೆ.Attachments area