ಸಮಗ್ರ ನ್ಯೂಸ್: ಬೆಂಗಳೂರು ಮೊಬೈಲ್ ಫೋನ್ ಕಳ್ಳತನ ತಡೆಗೆ ಪೊಲೀಸರ ಮಾಸ್ಟರ್ ಪ್ಲಾನ್ ಮಾಡಲಾಗಿದ್ದು, ಆ್ಯಪ್ ಮೂಲಕ ಮೊಬೈಲ್ ಫೋನ್ ಕಳ್ಳರಿಗೆ ಖಾಕಿ ಶಾಕ್ ನೀಡಲಿದ್ದಾರೆ.
ಬೆಂಗಳೂರು ನಗರದಲ್ಲಿ ಸಿಇಐಆರ್ ಆಯಪ್ ಮೂಲಕ ಮೊಬೈಲ್ ಫೋನ್ ಕಳ್ಳತನ ತಡೆಯಲು ಯೋಜನೆ ರೂಪಿಸಲಾಗುತ್ತಿದ್ದು, ಇದೇ ಮೊದಲ ಬಾರಿಗೆ ನಗರದಲ್ಲಿ ಸಿಇಐಆರ್ ಆ್ಯಪ್ ಬಳಕೆಗೆ ತಂತ್ರ ಬಳಸಲಾಗುತ್ತಿದೆ. ಕೇಂದ್ರ ಸರ್ಕಾರ ನಿರ್ಮಿತ ಸಿಇಐಆರ್ (ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್) ಆಯಪ್, ಮೊಬೈಲ್ ಕಳ್ಳತನವಾದ ಬಳಿಕ ಬೆಂಗಳೂರು ಪೊಲೀಸರ ಇ-ಲಾಸ್ಟ್ ನಲ್ಲಿ ದೂರು ದಾಖಲಿಸಬೇಕಾಗುತ್ತದೆ. ಇ-ಲಾಸ್ಟ್ ನಲ್ಲಿ ದೂರು ದಾಖಲಾಗುತ್ತಿದ್ದಂತೆ, ನೇರವಾಗಿ ಸಿಇಐಆರ್ ಆಯಪ್ ಗೆ ಮಾಹಿತಿ ರವಾನೆಯಾಗುತ್ತದೆ.
ಕೂಡಲೇ ಸಿಇಐಆರ್ ಆಯಪ್ ಮೂಲಕ ಮೊಬೈಲ್ ಆಕ್ಟಿವೇಷನ್ ಸಂಪೂರ್ಣ ಬ್ಲಾಕ್ ಮಾಡಲಾಗುತ್ತದೆ. ಅಂದ್ರೆ ಇ ಲಾಸ್ಟ್ ನಲ್ಲಿ ನಿಮ್ಮ ಮೊಬೈಲ್ ಐಎಂಇಐ ಸಂಖ್ಯೆ ನಮೂದಿಸಬೇಕಾಗುತ್ತದೆ. ನೊಂದಾಯಿತ ಐಎಂಇಐ ಸಂಖ್ಯೆಯ ಮೊಬೈಲ್ ನ್ನ ಸಂಪೂರ್ಣ ಬ್ಲಾಕ್ ಮಾಡಲಿರೋ ಸಿಇಐಆರ್ ಆಯಪ್, ಯಾವುದೇ ರೀತಿಯಲ್ಲಿ ಕಾರ್ಯ ನಿರ್ವಹಿಸದಂತೆ ಬ್ಲಾಕ್ ಆಗುತ್ತದೆ. ಮೊಬೈಲ್ ಕದ್ದರು ಬಳಕೆಗೆ ಆಗದಂತೆ ಬ್ಲಾಕ್ ಮಾಡಲಾಗುತ್ತದೆ.
ಆ ಮೂಲಕ ಮೊಬೈಲ್ ಕಳ್ಳತನಕ್ಕೆ ಬ್ರೇಕ್ ಹಾಕಲು ನಗರ ಪೊಲೀಸರ ಯೋಜನೆ ರೂಪಿಸಿದೆ, ಅದ್ರೆ ಕದ್ದ ಮೊಬೈಲ್ ಫೋನ್ ಬಿಡಿಭಾಗಗಳಾಗಿ ಮಾಡಿದರೆ ಬ್ಲಾಕ್ ಅಸಾಧ್ಯವಾಗಲಿದೆ. ಅಲ್ಲದೆ ಕಳ್ಳತನವಾದ ಮೊಬೈಲ್ ಫೋನ್ ಆನ್ ಆದ ಕೂಡಲೇ ಲೋಕೇಷನ್ ಪತ್ತೆ ಮಾಡಲಾಗುತ್ತದೆ. ಯಾವ ಏರಿಯಾದಲ್ಲಿ ಮೊಬೈಲ್ ಇದೆ ಅಂತಾ ಮೊಬೈಲ್ ಮಾಲೀಕರು ಮತ್ತು ಪೊಲೀಸರಿಗೆ ಲೋಕೇಷನ್ ತಲುಪಿಸುತ್ತದೆ.
ಸದ್ಯ ದೇಶದ ಎರಡು ಮಹಾನಗರಗಳಲ್ಲಿ ಮಾತ್ರ ಸಿಇಐಆರ್ ಆ್ಯಪ್ ಬಳಕೆ ಮಾಡಲಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಮತ್ತು ವಾಣಿಜ್ಯ ನಗರಿ ಮುಂಬೈನಲ್ಲಿ ಬಳಕೆ ಮಾಡಲಾಗುತ್ತಿದೆ. ಪೊಲೀಸರು ಎರಡು ನಗರಗಳಲ್ಲಿ ಸಿಇಐಆರ್ ಆ್ಯಪ್ ಬಳಸುತ್ತಿದ್ದಾರೆ.