ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಿಂದ ಉಗಾರ ಬುದ್ರಕ
ಮಾರ್ಗದ ರಸ್ತೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಂದು ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ಪ್ರಯಾಣ ಮಾಡುವ ಸಂದರ್ಭದಲ್ಲಿ ನಿರ್ಮಾಣವಾಗಿದೆ
ಅಧಿಕಾರಿಗಳು ಅವೈಜ್ಞಾನಿಕವಾಗಿ ರಸ್ತೆಯನ್ನು ನಿರ್ಮಾಣ ಮಾಡಿರುವುದು ಈದೀಗ ಸಾರ್ವಜನಿಕ ಕೇಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
ಅಪಘಾತ,ಅಥವಾ ಚಾಲಕನ ನಿಯಂತ್ರಣ ತಪ್ಪಿದಾಗ ವಾಹನ ರಸ್ತೆ ಬಿಟ್ಟು ಕೆಳಗೆ ಇಳಿಯಾಬಾರದು ಎಂಬ ಉದ್ದೇಶದಿಂದ ರಸ್ತೆ ಪಕ್ಕದಲ್ಲಿ ಚಾಲಕರು ಸುರಕ್ಷಿತವಾಗಿ ಸಂಚರಿಸಲು ರಸ್ತೆ ಸುರಕ್ಷಿತ ತಡೆಗೋಡೆಯನ್ನು ನೀರ್ಮಾಣ ಮಾಡಬೇಕೆಂಬ ನಿಯಮವಿದ್ದರೂ ಸಹ ಇಲ್ಲಿನ ನಿರ್ಮಾಣ ಮಾಡದೆ ಅಧಿಕಾರಿಗಳು ಜನರ ಜೀವನ ಜೋತೆಗೆ ಚೇಲ್ಲಾಟ ಆಡುತ್ತಿದ್ದಾರೆ
ಇಂದು ಮಧ್ಯಾಹ್ನ ಗೋಡ್ಸ ವಾಹನದ ಚಾಲಕನೋಬ್ಬ ಅಫಘಾತ ಸಂಭವಿಸುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಗೋಡ್ಸ ವಾಹನ ರಸ್ತೆ ಬಿಟ್ಟ ತಗ್ಗು ಪ್ರದೇಶದಲ್ಲಿ ಬಿದ್ದಿದ್ದು ಚಾಲಕನ ಪ್ರಾಣಾಪಾಯದಿಂದ ಪಾರಾದ ಘಟನೆ ಜರುಗಿದೆ
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ರಸ್ತೆಗೆ ಸುರಕ್ಷಾ ತಡೆಗೋಡೆ ನಿರ್ಮಾಣ ಮಾಡಿ ಅನುಕೂಲ ಮಾಡಿ ಎಂದು ವಾಹನ ಸವಾರರು ನಿದ್ದೆ ಮಂಪರಿನಲ್ಲಿರುವ ಅಧಿಕಾರಿಗಳಿಗೆ ಆಗ್ರಹ ಮಾಡುತ್ತಿದ್ದಾರೆ