ಬೆಂಗಳೂರು: ನಟಿ ಶೃತಿ ಅವರು ತಮ್ಮ ಜನ್ಮ ದಿನಕ್ಕೆ ಬೆಂಗಳೂರಲ್ಲಿ ಇಲ್ಲ. ಅವರು ಐದು ದಿನಗಳ ಕಾಲ ಸುಂದರ ಮಾಲ್ಡೀವ್ಸ್ ಗೆ ಹೋಗುತ್ತಿದ್ದಾರೆ. ಇಲ್ಲಿಯ ನಿಸರ್ಗ ಸೌಂದರ್ಯವನ್ನು ಸವಿಯಲಿದ್ದಾರೆ. ಅಲ್ಲಿ ತಮ್ಮ ಜನ್ಮ ದಿನವನ್ನೂ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ.
ಅಮ್ಮ ನಿನ್ನ ಜನ್ಮ ದಿನಕ್ಕೆ ಹೊಸ ಪ್ಲಾನ್ ಮಾಡೋಣ. ಈ ಸಲದ ನಿಮ್ಮ
ಬರ್ತ್ಡೇ ಗೆ ಮಾಲ್ಡೀವ್ಸ್ ಗೆ ಹೋಗೋಣ. ಹೀಗೆ ಅಮ್ಮನಿಗಾಗಿಯೇ ಶೃತಿ ಮಗಳು ಗೌರಿ ಮಾಲ್ಡೀವ್ಸ್ಗೆ ಹೋಗುವ ಪ್ಲಾನ್ ಮಾಡಿದ್ದಾರೆ. ಇದು ನನ್ನ ಪ್ಲಾನ್ ಅಲ್ಲ, ಮಗಳ ಪ್ಲಾನ್ ಅಂತಲೇ ಶೃತಿ ಅವರು ಈಗ ಹೇಳಿಕೊಂಡಿದ್ದಾರೆ.