ಸಮಗ್ರ ನ್ಯೂಸ್: ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಕರಾವಳಿಯಲ್ಲಿ ರಾಷ್ಟ್ರೀಯ ತನಿಖಾ ದಳ ತನ್ನ ಕಾರ್ಯವೈಖರಿಯನ್ನು ಚುರುಕುಗೊಳಿಸಿದ್ದು, ಗುರುವಾರ ಮುಂಜಾನೆ ಎಸ್ಡಿಪಿಐ ನಾಯಕ ರಿಯಾಝ್ ಫರಂಗಿಪೇಟೆ ಮನೆ ಮೇಲೆ ದಾಳಿ ನಡೆಸಿದೆ.
ಪೊಲೀಸ್ ತನಿಖಾ ವರದಿ ಹೊರಬಿದ್ದ ಮೇಲೂ ಪ್ರವೀಣ್ ನೆಟ್ಟಾರು ಪ್ರಕರಣವನ್ನು ರಾಜ್ಯ ಸರಕಾರ NIA ಗೆ ವಹಿಸಿದೆ. ದ.ಕ ಜಿಲ್ಲೆಯಲ್ಲಿ NIA ತನಿಖೆ ಮುಂದುವರಿದಿದ್ದು ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ NIA ಸಪ್ಟೆಂಬರ್ 7 ರಂದು SDPI ಹಾಗೂ PFI ನಾಯಕರನ್ನು ಗುರಿಯಾಗಿಸಿ 30 ಕಡೆ ದಾಳಿ ನಡೆಸಿತ್ತು.
ಇದರ ಮುಂದುವರಿದ ಭಾಗವಾಗಿ ಇಂದು ಬೆಳಿಗ್ಗೆ SDPI ರಾಷ್ಟ್ರೀಯ ನಾಯಕ ರಿಯಾಝ್ ಫರಂಗಿಪೇಟೆ ಮನೆಗೆ NIA ದಾಳಿ ನಡೆಸಿದ್ದು, ಇದನ್ನು ವಿರೋಧಿಸಿ ಮನೆಮುಂದೆ SDPI ಕಾರ್ಯಕರ್ತರು ಪ್ರತಿಭಟಿನೆ ನಡೆಸಿದರು.
ಈ ನಡುವೆ ಬುಧವಾರ ಪಿಎಫ್ಐ ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ್ದು, ಮುಸ್ಲಿಂ ಸಮುದಾಯವನ್ನು ಭಯಬೀತಿಗೊಳಿಸಲು ಮತ್ತು ಬಿಜೆಪಿ ಕಾರ್ಯಕರ್ತರ ಆಕ್ರೋಶ ತಣ್ಣಗಾಗಿಸಲು ರಾಜ್ಯ ಸರಕಾರ NIA ಛೂಬಿಟ್ಟಿದೆ. ಇದು ಪ್ರಕರಣದಲ್ಲಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿ ರಾಷ್ಟ್ರೀಯ ತನಿಖಾದಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಆರೋಪಿಸಿದೆ.