ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೇ.೨೬ ರಂದು ಒಂದೇ ದಿನ ಹನ್ನೊಂದು ಮಂದಿ ಬಲಿಯಾಗಿರುವ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ. ಸಾವಿನ ಸಂಖ್ಯೆಯಲ್ಲಿ ಒಂದೇ ಬಾರಿಗೆ ಏರಿಕೆಯಾಗಿದ್ದು ಆತಂಕ ಮೂಡಿಸಿದೆ.
ಕಳೆದ ೨೪ ಗಂಟೆಗಳಲ್ಲಿ ಕೊರೊನಾ ಸೋಂಕಿಗೆ ೧೧ ಮಂದಿ ಸಾವನ್ನಪಿದ್ದು, ಜಿಲ್ಲೆಯಲ್ಲಿ ಈವರೆಗೆ ಬಲಿಯಾದವರ ಸಂಖ್ಯೆ ೮೮೪ ಕ್ಕೆ ಏರಿಕೆಯಾಗಿದೆ.
ಇನ್ನು ಜಿಲ್ಲೆಯಲ್ಲಿ ಇದೇ ವೇಳೆ ೭೨೯ ಮಂದಿ ಕೊರೊನಾ ಪಾಸಿಟಿವ್ ಆಗಿದ್ದಾರೆ. ೭೫೬ ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ೧೦,೦೯೯ ಮಂದಿ ಒಟ್ಟು ಸೋಂಕಿತರು ಇದ್ದಾರೆ.
ಉಡುಪಿ:
ಜಿಲ್ಲೆಯಲ್ಲಿ ಇನ್ನೂ ಕೂಡಾ ಅನೇಕರು ಕೋವಿಡ್ ನಿಯಮವನ್ನು ಉಲ್ಲಂಘಿಸುತ್ತಿರುವುದರಿಂದ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಾ ಇದೆ. ಜಿಲ್ಲೆಯಲ್ಲಿ ಮೇ.೨೬ ರಂದು ೯೭೩ ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಪೈಕಿ ಉಡುಪಿಯಲ್ಲಿ ೩೫೩, ಕುಂದಾಪುರ ೩೪೦, ಕಾರ್ಕಳ ೨೭೩ ಹಾಗೂ ಹೊರ ಜಿಲ್ಲೆಯ ಏಳು ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ಈ ಮೂಲಕ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ೫೫೨೦೧ಕ್ಕೆ ಏರಿಕೆಯಾಗಿದೆ. ಮೇ.೨೬ ರಂದು ಜಿಲ್ಲೆಯಲ್ಲಿ ೫ ಮಂದಿ ಸೋಂಕಿತರು ಮೃತಪಟ್ಟಿದ್ದು, ಈ ಪೈಕಿ ಉಡುಪಿಯ ಮೂವರು ಹಾಗೂ ಕುಂದಾಪುರದ ಇಬ್ಬರು ಸೋಂಕಿನಿAದ ಸಾವನಪ್ಪಿದ್ದಾರೆ.
ಈ ವರೆಗೆ ಜಿಲ್ಲೆಯಲ್ಲಿ ಒಟ್ಟು ೩೧೫ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.