ಸಮಗ್ರ ನ್ಯೂಸ್: ಅಬಕಾರಿ ನೀತಿಯ ಕಾರಣಕ್ಕಾಗಿ ಸಂಕಷ್ಟಕ್ಕೆ ಸಿಲುಕಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ 58 ಮತ ಗಳಿಸುವ ಮೂಲಕ ಗೆದ್ದು ಬೀಗಿದ್ದಾರೆ.
ಎಪ್ಪತ್ತು ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 62 ಸ್ಥಾನಗಳನ್ನು ಗಳಿಸಿದ್ದು ಈ ಪೈಕಿ 58 ಮತಗಳು ಅವರಿಗೆ ಲಭಿಸಿವೆ.
ತಮ್ಮ ಪಕ್ಷದ ಸದಸ್ಯರನ್ನು ಖರೀದಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಈ ಹಿಂದೆ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದು, ಹೀಗಾಗಿ ವಿಶ್ವಾಸಮತ ಯಾಚನೆಗೆ ಮುಂದಾಗಿದ್ದರು.
ಆದರೆ ಆಮ್ ಆದ್ಮಿ ಪಕ್ಷದ 62 ಶಾಸಕರ ಪೈಕಿ ವಿಶ್ವಾಸಮತ ಯಾಚನೆ ವೇಳೆ 58 ಮಂದಿ ಮಾತ್ರ ಸರ್ಕಾರದ ಪರವಾಗಿ ಮತ ಚಲಾಯಿಸಿರುವುದು ಅಚ್ಚರಿಗೆ ಕಾರಣವಾಗಿದೆ.