ಸಮಗ್ರ ನ್ಯೂಸ್: ಮೋಹಕತಾರೆ ರಮ್ಯಾ ಗಣೇಶ ಹಬ್ಬಕ್ಕೆ ಗುಡ್ ನ್ಯಾಸ್ ನೀಡುವುದಾಗಿ ಬಹಿರಂಗ ಪಡಿಸಿದ್ದರು. ರಮ್ಯಾ ನೀಡುವ ಸಿಹಿ ಸುದ್ದಿ ಏನಿರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದರು. ಇದೀಗ ಕೊನೆಗೂ ರಮ್ಯಾ ಗುಡ್ ನ್ಯೂಸ್ ಏನು ಎನ್ನುವುದು ಬಹಿರಂಗವಾಗಿದೆ. ‘ನಾಳೆ ಬೆಳಗ್ಗೆ 11.15ಕ್ಕೆ ಸುದ್ದಿ ಬರುತ್ತೆ.
ಅದು ಅಫೀಶಿಯಲ್ ವಿಚಾರ’ ಎಂದಿದ್ದರು ರಮ್ಯಾ. ಹೀಗಾಗಿ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹೆಚ್ಚಾಗಿತ್ತು. ಜೊತೆಗೆ ರಮ್ಯಾ ಮತ್ತೆ ಸಿನಿಮಾ ಮಾಡ್ತಾರೆ ಎನ್ನುವ ಸುಳಿವು ಅಭಿಮಾನಿಗಳಿಗೆ ಸಿಕ್ಕಿತ್ತು. ಆದರೀಗ ನಿರ್ಮಾಪಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಹೌದು ರಮ್ಯಾ ನಿರ್ಮಾಪಕಿಯಾಗಿ ಸಿನಿಮಾ ರಂಗಕ್ಕೆ ಮತ್ತೆ ವಾಪಾಸ್ ಆಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಮದಲ್ಲಿ ಬಹಿರಂಗ ಪಡಿಸಿದ್ದಾರೆ. ಆಪಲ್ ಬಾಕ್ಸ್ ನಿರ್ಮಾಣ ಸಂಸ್ಥೆ ಮೂಲಕ ಇನ್ಮುಂದೆ ಸಿನಿಮಾ ಮತ್ತು ವೆಬ್ ಸೀರಿಸ್ ನಿರ್ಮಾಣ ಮಾಡುವುದಾಗಿ ರಮ್ಯಾ ಬಹಿರಂಗ ಪಡಿಸಿದ್ದಾರೆ.
ಅಂದಹಾಗೆ ತನ್ನ ನಿರ್ಮಾಣ ಸಂಸ್ಥೆಯ ಹೆಸರು ‘ಆಪಲ್ ಬಾಕ್ಸ್’ ಎಂದರೇನು ಎನ್ನುವುದನ್ನು ವಿವರಿಸಿದ್ದಾರೆ. ‘ಪುಟ್ಟ ಮರದ ಪೆಟ್ಟಿಗೆ. ನನ್ನ ಚಿತ್ರರಂಗದ ಪಯಣದುದ್ದಕ್ಕೂ ನಿರಂತರವಾಗಿ ಆಪಲ್ ಬಾಕ್ಸ್ ಜೊತೆಗಿದ್ದೆ. ಸೆಟ್ನಲ್ಲಿ ಕೂರಲು ಕುರ್ಚಿಗಳಲ್ಲದೇ ಇದ್ದಾಗ ಅಥವಾ ಕ್ಯಾಮರಾ, ಇಲ್ಲವೇ ನಟರ ಎತ್ತರ ಹೆಚ್ಚಿಸಬೇಕಾದಾದ ಈ ಆಪಲ್ ಬಾಕ್ಸ್ ನೆರವಿಗೆ ಒಂದಿದೆ. ಈ ಪೆಟ್ಟಿಗೆಯ ಸರಳತೆ ನನಗೆ ಸದಾ ಸ್ಫೂರ್ತಿಯಾಗಿ ನನ್ನನ್ನು ಪ್ರೇರೇಪಿಸಿದೆ’ ಎಂದು ರಮ್ಯಾ ತನ್ನ ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಬಗ್ಗೆ ವಿವರಿಸಿದ್ದಾರೆ.